ಬೆಂಗಳೂರು : ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಹೇಳಿಕೆ ನೀಡಿ ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಶಕ್ತಿ ಯೋಜನೆ ಪರಿಷ್ಕರಣೆ ಮಾಡ್ತಿವಿ ಎಂಬ ಡಿಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ ಸರ್ಕಾರದ ಮುಂದೆ ಈ ವಿಚಾರ ಇಲ್ಲ, ಮಹಿಳೆಯರೇ ಹೇಳ್ತಾ ಇದ್ದಾರೆ ಎಂದು ಕೇಳಿದೆ, ಇದರ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರದ ಹಂತದಲ್ಲಿ ಈ ರೀತಿ ಯೋಚನೆ ಇಲ್ಲ ಅಂತ ಹೇಳ್ತಾ ಇದ್ದೀನಿ ನಂಬಿಕೆ ಇಲ್ವಾ ನಿಮಗೆ ಸರ್ಕಾರದ ಹಂತದಲ್ಲಿ ಪರಿಷ್ಕರಣೆ ಮಾಡೋ ಪರಿಸ್ಥಿತಿ ಇಲ್ಲ
ಆ ರೀತಿಯ ಉದ್ದೇಶವೂ ಇಲ್ಲ, ಆ ರೀತಿಯ ಪ್ರಸ್ತಾವವೂ ಇಲ್ಲ ಎಂದು ಹೇಳಿದರು.
ಉಪಚುನಾವಣಾ ಅಖಾಡಕ್ಕೆ ಸಿಎಂ ಎಂಟ್ರಿ
ನವೆಂಬರ್ 4ರಿಂದ ಬೈ ಎಲೆಕ್ಸನ್ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿಯಾಗಲಿದ್ದು. ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿರುವ ಸಿಎಂ, ಚನ್ನಪಟ್ಟಣ, ಶಿಗ್ಗಾವ್ ಹಾಗೂ ಸಂಡೂರಿನಲ್ಲಿ ಸಿಎಂ ಪ್ರಚಾರ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕಾಂಗ್ರೆಸ್ ಅಭ್ಯರ್ಥಿ ಗಳ ಪರ ಪ್ರಚಾರ ಕೈಗೊಳ್ಳಿರುವ ಸಿಎಂ, ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ವಕ್ಫ್ ಗೊಂದಲದ ಕುರಿತು ಸಿಎಂ ಮಾತು
ವಕ್ಫ್ ಆಸ್ತಿ ಗೊಂದಲ ವಿಚಾರವಾಗಿ ಮಾತನಾಡಿದ ಸಿಎಂ. ಬಿಜೆಪಿಯವರು ರಾಜಕೀಯಕ್ಕಾಗಿ ಮಾಡ್ತಾ ಇದ್ದಾರೆ
ಅವರ ಕಾಲದಲ್ಲೂ ನೋಟೀಸ್ ಕೊಟ್ಟಿದ್ದರು ಅದಕ್ಕೆ ಏನು ಹೇಳ್ತಾರೆ ? ಎಂದು ಪ್ರಶ್ನಿಸಿದರು.
ಬಿಜೆಪಿಯವರ ಕಾಲದಲ್ಲಿಯು 200ಕ್ಕೂ ಹೆಚ್ಚು ನೋಟೀಸ್ ಕೊಟ್ಟಿದ್ರಲಾ, ಇವಾಗ ಈ ಇಬ್ಬದಿ ರಾಜಕೀಯ ಮಾಡಬಾರದು. ಅವರ ಕಾಲದಲ್ಲಿ ನೋಟೀಸ್ ಕೊಟ್ಟು ಪ್ರಾರಂಭ ಮಾಡಿದ್ದು ಇವರು ಎಂದು ಹೇಳಿದರು.
ನೋಟೀಸ್ ವಾಪಾಸ್ ತೆಗೆದುಕೊಳ್ಳುವ ವಿಚಾರವಾಗಿ ಮಾತನಾಡಿದ ಸಿಎಂ ಈಗ ನಾನು ಹೇಳಿದ್ದೇನೆ ನೋಟೀಸ್ ವಾಪಸ್ ತಗೋತೀವಿ. ಯಾವ ರೈತರನ್ನು ಯಾರು ಒಕ್ಕಲೆಬ್ಬಿಸಲ್ಲ ಅಂತ ಹೇಳಿದ್ದೇವೆ ಬೇರೆ ಬೇರೆ ಜಿಲ್ಲೆಗಳಲ್ಲಿ ನೋಟೀಸ್ ಕೊಟ್ಟ ವಿಚಾರವಾಗಿ ಮಾತನಾಡಿದ ಸಿಎಂ ಯಾವ ಜಿಲ್ಲೆಯಾದ್ರೂ ಇರಲಿ ಬಿಡಿ ಅವರು ನೋಟೀಸ್ ಕೊಟ್ಟಿರಲಿಲ್ವಾ,ಯಾಕೆ ಕೊಟ್ಟಿದ್ದರು ಅವರು ಅನೇಕ ಜಿಲ್ಲೆಗಳಲ್ಲಿ ಅವರೂ ನೋಟೀಸ್ ಕೊಟ್ಟಿದ್ದರು ಎಂದು ಪ್ರತಿ ಆರೋಪ ಮಾಡಿದರು.
ಮುಂದುವರಿದು ಮಾತನಾಡಿದ ಸಿಎಂ ಬೈ ಎಲಕ್ಷನ್, ಹಾಗೂ ಮಹಾರಾಷ್ಟ್ರ ಚುನಾವಣೆಗಾಗಿ ಈ ರೀತಿ ಮಾಡ್ತಾ ಇದ್ದಾರೆ ಚುನಾವಣೆಯಲ್ಲಿ ಈ ವಿಚಾರ ಬಿಜೆಪಿ ಬಳಸಿಕೊಳ್ಳುವ ವಿಚಾರವಾಗಿ ಇಶ್ಯೂ ಕ್ರಿಯೇಟ್ ಮಾಡಿದ್ದಾರೆ.
ಎಂದು ಹೇಳಿದರು.