ರಾಮನಗರ : ಚನ್ನಪಟ್ಟಣ ಉಪ ಕದನ ರಂಗೇರಿದ್ದು, ಇಂದು ದೋಸ್ತಿ ನಾಯಕರು ಬೊಂಬೆನಗರಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ರು, ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆಗೂ ಮುನ್ನ ಟೆಂಪಲ್ ರನ್ ನಡೆಸಿದ ದಳಪತಿಗಳು ಚನ್ನಪಟ್ಟಣದ ಟೌನ್ ನಲ್ಲಿ ಬೃಹತ್ ರೋಡ್ ಶೋ ಮೂಲಕ ಭರ್ಜರಿಯಾಗಿ ನಾಮಿನೇಷನ್ ಮಾಡಿ ಕಾಂಗ್ರೆಸ್ ನಾಯಕರಿಗೆ ಟಕ್ಕರ್ ನೀಡಿದ್ರು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಬಿಜೆಪಿ ಮತ್ತು ಜೆಡಿಎಸ್ ನಾಯಕರ ಜತೆಯಾಗಿ ನಿಖಿಲ್ ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಇನ್ನು ನಿಖಿಲ್ ನಾಮಪತ್ರದಲ್ಲಿ ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರ ನೀಡಿದ್ದು, ನಿಖಿಲ್ 113 ಕೋಟಿ ರೂ. ಮೌಲ್ಯದ ಆಸ್ತಿ ಒಡೆಯರಾಗಿದ್ದಾರೆ, ಇನ್ನು ಅವರ ಪುತ್ರ ವ್ಯಾನ್ ದೇವ್ ಹೆಸರಿನಲ್ಲಿ 11ಲಕ್ಷ ರೂ. ಹಣ ಇದ್ದರೆ, ಪತ್ನಿ ರೇವತಿ ನಿಖಿಲ್ ಹೆಸರಲ್ಲಿ 5.49ಕೋಟಿ ಮೌಲ್ಯದ ಚರಾಸ್ತಿ, 43ಲಕ್ಷ ಮೌಲ್ಯದ ಸ್ಥಿರಾಸ್ತಿ ಇದೆ.
- ನಿಖಿಲ್ ಕುಮಾರಸ್ವಾಮಿ ಬಳಿ 46.81 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.
- ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹೆಸರಿನಲ್ಲಿ 1.79 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ.
- ನಿಖಿಲ್ ಕುಮಾರಸ್ವಾಮಿ ಬಳಿ 28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
- ರೇವತಿ ಬಳಿ 28 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ.
ಕೆಜಿಗಟ್ಟಲೆ ಚಿನ್ನ , ಅರ್ಧ ಕ್ವಿಂಟಾಲ್ ಬೆಳ್ಳಿ
ನಿಖಿಲ್ ಕುಮಾರಸ್ವಾಮಿ ಹೆಸರಿನಲ್ಲಿ ಒಟ್ಟು 1.5 ಕೆಜಿ ಚಿನ್ನದ ಆಭರಣಗಳಿದ್ದು. 16 ಕೆಜಿ ಬೆಳ್ಳಿ ವಸ್ತುಗಳಿವೆ ಎಂದು ಮಾಹಿತಿ ನೀಡಿದ್ದಾರೆ. ಇನ್ನ ನಿಖಿಲ್ ಕುಮಾರಸ್ವಾಮಿ ಅವರ ಪತ್ನಿ ರೇವತಿ ಅವರ ಹೆಸರಿನಲ್ಲಿ 1.5ಕೆಜಿ ಚಿನ್ನ, 33ಕೆಜಿ ಬೆಳ್ಳಿ ಮತ್ತು 13 ಕ್ಯಾರೆಟ್ ಡೈಮೆಂಡ್ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಇನ್ನು ವಾಹನಗಳ ವಿಷಯಕ್ಕೆ ಬಂದರೆ. ನಿಖಿಲ್ ಬಳಿ 1 ಇನ್ನೋವಾ ಹೈಕ್ರಾಸ್ ಕಾರು, 1 ರೇಂಜ್ ರೋವರ್
ಎರಡು ಕ್ಯಾರಾವ್ಯಾನ್ ಮತ್ತು 1 ಇನ್ನೋವಾ ಕ್ರಿಸ್ಟಾ ಕಾರು ಇದೆ ಎಂದು ಘೋಷಿಸಿದ್ದು. ನಿಖಿಲ್ ಹೆಸರಲ್ಲಿ 70. 44 ಕೋಟಿ ಸಾಲ, ಪತ್ನಿ ಹೆಸರಲ್ಲಿ 4.96 ಕೋಟಿ ಸಾಲ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.