ಹೊಸಪೇಟೆ: ಚಿನ್ನದ ಆಸೆಗೆ ಬಿದ್ದ ಖತರ್ನಾಕ್ ಕಳ್ಳಿ ಕೆಲಸ ಮಾಡುತ್ತಿದ್ದ ಮನೆಯಲ್ಲಿಯೇ ಕಳ್ಳತನ ಮಾಡಿ ಕದ್ದ ಚಿನ್ನವನ್ನು ವಾಟ್ಸಾಪ್ ಡಿಪಿಗೆ ಹಾಕಿಕೊಳ್ಳುವ ಮೂಲಕ ಹೆಚ್ಎಎಲ್ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಹೊಸಪೇಟೆ ಮೂಲದ ರೇಣುಕಾ (38) ಬಂಧಿತ ಆರೋಪಿ, ಅಪಾರ್ಟ್ಮೆಂಟ್ಗಳ ಬಳಿ ತೆರಳಿ ಮನೆಕೆಲಸ ಇದ್ಯ ಎಂದು ಕೇಳುತ್ತಿದ್ದ ರೇಣುಕಾ. ನನಗೆ ಕುಕ್ಕಿಂಗ್ ಬರುತ್ತೆ ಸೌತ್ ನಾರ್ಥ್ ಎಲ್ಲಾ ಅಡಿಗೆ ಮಾಡ್ತೀನಿ ಎಂದು ಹೇಳಿ ಎರಡು ಮನೆಗಳಲ್ಲಿ ಕೆಲಸ ಗಿಟ್ಟಿಸಿಕೊಂಡದ್ದಳು, ಈ ಎರಡೂ ಮನೆಗಳಲ್ಲಿ ತನ್ನ ಕೈಚಳಕ ತೋರಿ ಸುಮಾರು 100 ಗ್ರಾಂ. ಚಿನ್ನಾಭರಣ ಕದ್ದಿದ್ದಳು. ಈ ಪೈಕಿ ಮನೆ ಮಾಲಕಿಯ ತಾಳಿ ಸಮೇತ ಕದ್ದಿದ್ದಳು.
ಇದನ್ನೂ ಓದಿ: ಬೈಕ್ ಅಪಘಾತ: ಬೈಕ್ ಸವಾರನನ್ನು 2 ಕಿ.ಮೀ ದೂರ ಎಳೆದೊಯ್ದ ಕಾರು, ಕೊಲೆ ಶಂಕೆ?
ಮನೆಯಲ್ಲಿ ಕಳ್ಳತನವಾಗಿರುವ ಕುರಿತು ಮನೆ ಮಾಲಕಿ ರೇಣುಕಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಘಟನೆ ಸಂಬಂಧ ಮನೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಳನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ತನಗೇನು ಗೊತ್ತಿಲ್ಲ ಎಂದು ನಾಟಕವಾಡಿದ್ದಳು. ಬಳಿಕ ಪೊಲೀಸರು ಬಿಟ್ಟು ಕಳಿಸಿದ್ದರು.
ಇದಾದ ಕೆಲದಿನಗಳ ಬಳಿಕ ಪೊಲೀಸರು ನನ್ನನ್ನು ಏನು ಮಾಡುವುದಿಲ್ಲ ಎಂದು ತಿಳಿದ ರೇಣುಕಾ ಕದ್ದ ನೆಕ್ಲೆಸ್ ಧರಿಸಿ ಫೋಟೋ ತೆಗೆದುಕೊಂಡಿದ್ದಳು. ಅಷ್ಟೆ ಅಲ್ಲದೆ ಅದನ್ನು ತನ್ನ ವಾಟ್ಸಾಪ್ ಡಿಪಿಯಾಗಿ ಹಾಕಿಕೊಂಡಿದ್ದಳು. ಇದನ್ನು ಗಮನಿಸಿದ ಪೊಲೀಸರು ರೇಣುಕಾಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಅಸಲಿಯತ್ತು ಗೊತ್ತಾಗಿದೆ.
ವಿಚಾರಣೆ ವೇಳೆ ಕದ್ದಿರುವುದನ್ನು ಒಪ್ಪಿಕೊಂಡಿದ್ದಾಳೆ, ಬಂಧಿತಳಿಂದ 80 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದ HAL ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.