Saturday, September 21, 2024

‘ಗೃಹಲಕ್ಷ್ಮೀ’ ಹಣ 2-3 ದಿನದಲ್ಲಿ ಬಿಡುಗಡೆ

ಬೆಂಗಳೂರು: ಗೃಹಲಕ್ಷ್ಮೀ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದೆ. ಎರಡೂ ಮೂರು ದಿನದಲ್ಲಿ ಮೊದಲ ಹಂತದಲ್ಲಿ 26.65 ಲಕ್ಷ ಫಲಾನುಭವಿಗಳಿಗೆ ತಲಾ 2 ಸಾವಿರ ರೂ. ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಾಂಗ್ಲಾ ಪ್ರತಿಭಟನೆ: ಮಾಜಿ ಪ್ರಧಾನಿ ಹಸೀನಾ ಸೀರೆ, ಒಳ ಉಡುಪು ದೋಚಿದ ಪ್ರತಿಭಟನಾಕಾರರು

ಮೊದಲ ಹಂತದಲ್ಲಿ 533 ಕೋಟಿ ರೂ. ಪಾವತಿಗೆ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರದೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ. ಇನ್ನುಳಿದ ಫಲಾನುಭವಿಗಳಿಗೆ ಆ.10ರೊಳಗೆ ಜೂನ್ ತಿಂಗಳ ಹಣ ನೇರವಾಗಿ ಖಾತೆಗೆ ಸಂದಾಯವಾಗಲಿದೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಮ್ಮೆಗೇ ಪಾವತಿ ಮಾಡಲಾಗಿತ್ತು. ಇದೀಗ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿಗೆ ಬಾಕಿ ಉಳಿದಿದ್ದು, ವಾರಾಂತ್ಯದೊಳಗೆ ಜೂನ್ ತಿಂಗಳ ಹಣ ಪಾವತಿಯಾಗಲಿದೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES