Saturday, September 21, 2024

ಬಸ್​ ಟಿಕೆಟ್​ ದರ ಹೆಚ್ಚಳದ ಸುಳಿವು ನೀಡಿದ ವಾಯುವ್ಯ ಸಾರಿಗೆ ನಿಗಮ ಅಧ್ಯಕ್ಷ ರಾಜು ಕಾಗೆ

ಬೆಳಗಾವಿ: ಬಸ್​ ಟಿಕೆಟ್​ ದರವನ್ನು ಹೆಚ್ಚಿಸುವ ಚಿಂತನೆ ಮಾಡುತ್ತಿದ್ದೇವೆ ಎಂದು ಶಾಸಕ ಹಾಗು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಬೆಲೆ ಏರಿಕೆಯ ಸುಳಿವನ್ನು ನೀಡಿದ್ದಾರೆ.

ಇದನ್ನೂ ಓದಿ: ಬೆಳ್ಳಂ ಬೆಳಗ್ಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ದಂಡು: ವಾಹನ ದಟ್ಟಣೆ

ಬೆಳಗಾವಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಡಿಸೇಲ್ ಹಾಗೂ ಬಸ್ ಬಿಡಿಬಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಟಿಕೆಟ್ ದರ ಏರಿಕೆ ಮಾಡಿಲ್ಲ. ಶಕ್ತಿ ಯೋಜನೆಯಿಂದ ನಾವು ಲಾಸ್ ನಲ್ಲಿದ್ದೇವೆ. ಆದರೂ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ ಯಾಕಂದರೇ ನಾವು ಜನರಿಗೆ ಗ್ಯಾರೆಂಟಿ ನೀಡಿದ್ದೇವೆ ಆ ನಿಟ್ಟಿನಲ್ಲಿ ನಾವು ನಡೆಸಿಕೊಂಡು ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವಾಯುವ್ಯ ಸಾರಿಗೆಯನ್ನು ಲಾಭದಾಯಕ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಹುಬ್ಬಳ್ಳಿಯಲ್ಲಿ ಇಲಾಖೆಯ ಜಾಗ ಇದೆ ಅಲ್ಲಿ ಬಸ್​ ನಿಲ್ದಾಣ ನಿರ್ಮಾಣ ಮಾಡಿ ಲಾಭದತ್ತ ಕೊಂಡೊಯ್ಯುಬ ಕ್ರಮ ಕೈಗೊಳ್ಳಲಾಗುವುದು. ಈಗ ಓಲ್ವೋ ಬಸ್​ಗಳನ್ನು ಕೇಳುತ್ತಿದ್ದಾರೆ. ಅಥಣಿ, ಕಾಗವಾಡ ದಿಂದ ಬೆಂಗಳೂರಿಗೆ ಓಲ್ವೋ ಬಸ್​ ಬೇಡಿಕೆ ಇರುವುದರಿಂದ ಅಲ್ಲಿ ಹೆಚ್ಚು ಗಮನಹರಿಸಲಿದ್ದೇವೆ.

RELATED ARTICLES

Related Articles

TRENDING ARTICLES