Sunday, September 29, 2024

ಗ್ಯಾರಂಟಿ ಹೆಸರಲ್ಲಿ ಸರ್ಕಾರ ಲೂಟಿ : R. ಅಶೋಕ್

ಬೆಳಗಾವಿ: ರಾಜ್ಯದಲ್ಲಿ ಹಾಲಿನ ದರ ಏರಿಕೆ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಬಡವರ ರಕ್ತವನ್ನು ತಿಗಣೆ ರೀತಿಯಲ್ಲಿ ಹೀರುತ್ತಿದ್ದಾರೆ. ಲೋಕಸಭಾ ಚುನಾವಣೆ ಸೋಲಿನ ಕೋಪಕ್ಕೆ ಬೆಲೆ ಏರಿಕೆ ಪರ್ವ ಶುರುವಾಗಿದೆ. ಇನ್ನೂ ಮೇಲೆ ರಾಜ್ಯದಲ್ಲಿ ಬೆಲೆ ಏರಿಕೆ ನೋಡಬಹುದು. ಸಿಮೆಂಟ್, ಕಬ್ಬಿಣ ಸೇರಿ ಎಲ್ಲಾ ಬೆಲೆ ಏರಿಕೆ ಆಗಿದೆ. ಈಗ ಹಾಲಿನ ಬೆಲೆ 2 ರೂಪಾಯಿ ಏರಿಕೆ ಮಾಡಿದ್ದಾರೆ‌. ಕಳೆದ ವರ್ಷ ಮೂರು ರೂಪಾಯಿ ಜಾಸ್ತಿ ಮಾಡಿದ್ದರು.

ಇದನ್ನೂ ಓದಿ: ಜೈಲುಪಾಲಾದ ದರ್ಶನ್​: ಅಭಿಮಾನಿಗಳಿಂದ ಹೋಟೆಲ್​ ಹೆಸರು ಬದಲಾವಣೆ

ಬೆಳಗ್ಗೆ ಮಕ್ಕಳಿಗೆ ಹಾಲು ಕುಡಿಯಲು ಹೊರೆ ಆದರೆ, ಸಂಜೆ ಕೆಲಸ ಮಾಡಿ ಬರೋ ಜನರಿಗೆ ಆಲ್ಕೋಹಾಲ್ ಕುಡಿಯಲು ಹೊರೆಯಾಗಿದೆ. ಚುನಾವಣೆ ಮೊದಲು ಬೆಲೆ ಕಡಿಮೆ ಮಾಡೋ ಭರವಸೆ ನೀಡಿದ್ದರು. ಈ ಸಿಎಂ ಸಿದ್ದರಾಮಯ್ಯಗೆ ಎಷ್ಟು ನಾಲಿಗೆ ಇದೆ‌. ನಮಗೆ ಮಾನ, ಮಾರ್ಯಾದೆ ಇಲ್ಲಾ ಎಂದಿದ್ದರು.

ಈ ಸರ್ಕಾರ ಬಡವರನ್ನು ಸರ್ವನಾಶ ಮಾಡಲು ಬೆಲೆ ಏರಿಕೆ ಮಾಡುತ್ತಿದ್ದಾರೆ‌. ಜನರ ಶಾಪ ನಿಮಗೆ ತಟ್ಟಲಿದೆ. ಜುಲೈ 3 ಅಥವಾ 4ರಂದು ಮುತ್ತಿಗೆ ಹಾಕುತ್ತೇವೆ. ಗ್ಯಾರಂಟಿ ಹೆಸರಲ್ಲಿ ಲೂಟಿ ಹೊಡೆಯುತ್ತಿದ್ದಾರೆ‌ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES