Sunday, September 29, 2024

ಸಚಿವ ಬೈರತಿ ಸುರೇಶ್ ವಿರುದ್ಧ ಲಿಂಗಾಯತ ಶಾಸಕರ ದೂರು

ಬೆಂಗಳೂರು: ರಾಜ್ಯದಲ್ಲಿ ಸಚಿವರು ಮತ್ತು ಶಾಸಕರ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು ಸಚಿವ ಬೈರತಿ ಸುರೇಶ್​ ವಿರುದ್ದ ಲಿಂಗಾಯತ ಶಾಸಕರ ನಿಯೋಗ ಹೈಕಮಾಂಡ್​ಗೆ ದೂರು ನೀಡಲು ತೆರಳಿದೆ.

ಕರ್ನಾಟಕ ಕಾಂಗ್ರೆಸ್​​ನಲ್ಲಿ ಡಿಸಿಎಂ ಹುದ್ದೆ ಹೆಚ್ಚಿಸುವ ಬಗ್ಗೆ ಚರ್ಚೆ ಮತ್ತೆ ಜೋರಾಗಿರುವ ಬೆನ್ನಲ್ಲೇ ಇದೀಗ ಮತ್ತೊಂದು ಸುತ್ತಿನ ಸಂಘರ್ಷ ಆರಂಭವಾಗಿದೆ. ಸಚಿವರು ಮತ್ತು ಶಾಸಕರ ನಡುವಿನ‌ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದ್ದು, ಲಿಂಗಾಯತ ಶಾಸಕರ ನಿಯೋಗ ಹೈಕಮಾಂಡ್ ಭೇಟಿಗೆ ತೆರಳಿದೆ.

ಇದನ್ನೂ ಓದಿ: ನಂದಿನಿ ಹಾಲಿನ ದರ ಲೀಟರ್​ಗೆ 2ರೂ ಹೆಚ್ಚಳ: ಗ್ರಾಹಕರ ಜೇಬಿಗೆ ಕತ್ತರಿ

ಎರಡು ಪ್ರಮುಖ ವಿಚಾರಗಳ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ಲಿಂಗಾಯತ ಶಾಸಕರ ನಿಯೋಗ ತೆರಳಿದೆ. ನಿಯೋಗದಲ್ಲಿ ಬಾಬಾ ಸಾಹೇಬ್ ಪಾಟೀಲ್, ಯಶವಂತ ರಾಯಗೌಡ ಪಾಟೀಲ್ ಕೂಡ ಇರುವ ಬಗ್ಗೆ ಮಾಹಿತಿ ದೊರೆತಿದೆ. ಒಟ್ಟು 15 ಮಂದಿ ಲಿಂಗಾಯತ ಶಾಸಕರು ಇದ್ದಾರೆ ಎನ್ನಲಾಗಿದೆ.

ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಬೈರತಿ ಸುರೇಶ್ ವಿರುದ್ಧ ಲಿಂಗಾಯತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೈರತಿ ಸುರೇಶ್ ಸರ್ಕಾರದಲ್ಲಿ ಸೂಪರ್ ಸಿಎಂ ರೀತಿ ವರ್ತನೆ ಮಾಡುತ್ತಿದ್ದಾರೆ. ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದರೂ ಸಚಿವರ ಹಸ್ತಕ್ಷೇಪ ಹೆಚ್ಚಾಗಿದೆ. ಸಿಎಂ ಅವರ ಕಾರ್ಯಗಳಿಗೂ ಮೂಗು ತೂರಿಸುತ್ತಾರೆ ಎಂದು ದೂರು ನೀಡಲು ಶಾಸಕರ ನಿಯೋಗ ಮುಂದಾಗಿದೆ.

RELATED ARTICLES

Related Articles

TRENDING ARTICLES