Saturday, September 28, 2024

ಮಾನಗೇಡಿ ಕೆಲಸ ಮಾಡು ಅಂತಾ ಹೇಳಿದ್ವಾ? ಕುಮಾರಸ್ವಾಮಿ ಮಾತಿಗೆ ಸಚಿವ RB ತಿಮ್ಮಾಪುರ ಕಿಡಿ

ಬಾಗಲಕೋಟೆ: ಮಾಜಿ ಪ್ರಧಾನಿ ದೇವೇಗೌಡ ಕುಟುಂಬ ಮುಗಿಸಲು ಹುನ್ನಾರ ನಡೀತಿದೆ ಎಂಬ ಹೆಚ್​ಡಿ ಕುಮಾರಸ್ವಾಮಿ ಮಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಆರ್.ಬಿ.ತಿಮ್ಮಾಪೂರ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮಾನಗೇಡಿ ಕೆಲಸ ಮಾಡು ಅಂತಾ ನಾವು ಹೇಳಿದ್ವಾ. ಪ್ರಜ್ವಲ್ & ಸೂರಜ್ ಆ ಕೆಲಸಾ ಮಾಡಿಲ್ಲ ಅಂತಾ ಕುಮಾರಸ್ವಾಮಿ ಯಾದರೂ ಹೇಳಲಿ. ಕಾನೂನು ಎಲ್ಲರಿಗೂ ಅಷ್ಟೆ, ದೇವೆಗೌಡರ ಮೊಮ್ಮಕ್ಕಳಿಗೂ ಅಷ್ಟೆ, ನಮ್ಮ ಮಕ್ಕಳಿಗೂ ಅಷ್ಟೆ ಎಂದು ಕಿಡಿಕಾರಿದರು.

ಇದನ್ನೂ ಓದಿ: 2 ತಿಂಗಳಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ ವಿಐಪಿಗಳು ಇವರು

ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡ್ತಿದ್ದಾರೆ. ಅದಕ್ಕೆ ದೇವೇಗೌಡರ ಫ್ಯಾಮಿಲಿ ಮುಗಿಸಿಬಿಡ್ತಾರೇ, ಅಂತಾ ಹೇಳೋದು ಸರಿಯಲ್ಲ. ಅದ್ರಲ್ಲಿ ಲಾಭ ಹೇಗೆ ಪಡಿಬೇಕು ಅಂತಾ ಯೋಚ್ನೆ ಮಾಡ್ತಾರೆ. ಕೇಂದ್ರ ಸಚಿವರಾಗಿ ಹೆಚ್​.ಡಿ.ಕುಮಾರಸ್ವಾಮಿ ಕುಟುಂಬ ರಾಜಕಾರಣ ಮುಗಿಸಲು ಹುನ್ನಾರ ಅಂತಾ ಹೇಳಬಾರದು. ರಾಜಕೀಯ ಷಡ್ಯಂತ್ರ ಅಂತಾರೆ. ಮಾನಗೇಡಿ ಕೆಲಸ ಮಾಡಿದವ್ರನ್ನ ಬಿಟ್ರೆ ಅವ್ರ ದೃಷ್ಠಿಯಲ್ಲಿ ಸರ್ಕಾರ ಒಳ್ಳೆಯದು ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES