Saturday, September 28, 2024

ಇವೆಲ್ಲ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣ: ಪ್ರಿಯಾಂಕ್​ ಖರ್ಗೆ

ಕಲಬುರಗಿ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ವಿಚಾರಕ್ಕೆ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಸೂರಜ್‌ ರೇವಣ್ಣ ಪ್ರಕರಣ ವಿಚಿತ್ರ, ವಿಕೃತ, ಅಸಹ್ಯಪಡುವ ಪ್ರಕರಣಗಳು ಎಂದು ತೀವ್ರ ಬೇಸರ ಹೊರಹಾಕಿದ್ದಾರೆ. ಈ ಪ್ರಕರಣದ ಬಗ್ಗೆ ಏನು ಮಾತನಾಡಬೇಕು ಅಂತ ಗೊತ್ತಾಗ್ತಿಲ್ಲ. ನಾವು ಜವಾಬ್ದಾರಿ ಕುಟುಂಬದಿಂದ ಬಂದಿರೋದು, ಈ ಪ್ರಕರಣದ ಕುರಿತು ದೊಡ್ಡ ಮನೆ, ದೊಡ್ಡ ಕುಟುಂಬದವರಿಗೆ ನೀವು ಕೇಳಬೇಕು.

ಇದನ್ನೂ ಓದಿ:Power TV Impact: ಸಲಿಂಗ ಪ್ರಕರಣ​​​; ಡಾ.ಸೂರಜ್‌ ರೇವಣ್ಣ ಅರೆಸ್ಟ್​​​​​

ಈ ಕಳಂಕ ಅಳಿಸೋವರೆಗೂ ಅಧಿಕಾರ ಬಿಟ್ಟಿರುತ್ತೇವೆ ಅಂತನಾದರೂ ಹೇಳ್ತಾರಾ? ಕುಮಾರಸ್ವಾಮಿ, ದೇವೇಗೌಡರು, ರೇವಣ್ಣ ಅವರ ಬಗ್ಗೆ ನಾನು ಮಾತನಾಡೋದಿಲ್ಲ. ಅವರ ಆತ್ಮಸಾಕ್ಷಿಗೆ ತಿಳಿದಂತೆ ಅವರು ಕೆಲಸ ಮಾಡಬೇಕು. ಆದರೇ, ಬಿಜೆಪಿಯವರ ಸ್ಮಶಾನ ಮೌನ ಯಾಕೆ ಅಂತಾ ಗೋತ್ತಾಗ್ತಿಲ್ಲ. ಉಳಿದ ಸಮಯದಲ್ಲಿ ನ್ಯಾಯದ ಬಗ್ಗೆ ಮಾತಾಡುವ ಬಿಜೆಪಿಯವರು ಇವಾಗ ಮೌನ ಯಾಕೆ? ಸಂವಿಧಾನ ಉಲ್ಲಂಘನೆ, ಕಾನೂನು ಉಲ್ಲಂಘನೆ ಆದಾಗಾ ಮಾತಾಡೋದಿಲ್ಲ ಎಂದು ಕುಟುಕಿದ್ದಾರೆ.

ಬಿಜೆಪಿ ಸ್ಮಶಾನ ಮೌನ ಯಾಕೆ?: ಮಾತೆತ್ತಿದರೆ ನ್ಯಾಯದ ಬಗ್ಗೆ ಮಾತನಾಡುವ ಹಾಗೂ ಜಪ ಮಾಡುವ ಬಿಜೆಪಿಯವರು ಈ ಪ್ರಕರಣದಲ್ಲಿ ಸ್ಮಶಾನ ಮೌನ ಯಾಕೆ ವಹಿಸಿದ್ದಾರೆ ಎಂದು ಸಚಿವ ಖರ್ಗೆ ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES