Saturday, September 28, 2024

ಶಿವಮೊಗ್ಗದ ಅನಧಿಕೃತ ಶಾಲಾ-ಕಾಲೇಜಿಗಳಿಗೆ ಶಿಕ್ಷಣ ಸಚಿವರ ಎಚ್ಚರಿಕೆ: ಜುಲೈ 1 ರೊಳಗೆ ಕ್ರಮ

ಶಿವಮೊಗ್ಗ: ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಎಲ್ಲಾ ಶಾಲಾ ಕಾಲೇಜುಗಳಿಗೂ ನೋಟೀಸ್​ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾದ್ಯಮ ಪ್ರತಿಕ್ರಿಯೆ ನೀಡಿದ ಅವರು, ಶಿವಮೊಗ್ಗದಲ್ಲಿ ಮಲ್ನಾಡ್ ಪಿಯು ಕಾಲೇಜು ಹೆಸರಿನಲ್ಲಿ ಕಾಲೇಜು ನಡೆಸದೇ, ಸರ್ ಎಂ.ವಿ. ಪಿಯು ಕಾಲೇಜು ಹೆಸರಿನಲ್ಲಿ ಅನಧಿಕೃತವಾಗಿ ಕಾಲೇಜು ನಡೆಸಲಾಗುತ್ತಿದೆ. ಅಲ್ಲದೇ, ಶಿವಮೊಗ್ಗದ ಡೆಲ್ಲಿ ವರ್ಲ್ಡ್ ಸ್ಕೂಲ್, ಕುವೆಂಪು ಬಡಾವಣೆಯಲ್ಲಿ ವಿದ್ಯಾಭಾರತಿ ಶಾಲಾ-ಕಾಲೇಜು ಕೂಡ ಅನಧಿಕೃತವಾಗಿದೆ. ಈ ಬಗ್ಗೆ ಜುಲೈ 1ರೊಳಗೆ ಈ ರೀತಿಯ ಎಲ್ಲಾ ಅನಧಿಕೃತ ಶಾಲಾ ಕಾಲೇಜುಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ತೆಗೆದುಕೊಳ್ಳಲು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಸಿ.ಪಿ.ಯೋಗೇಶ್ವರ್‌ ತಲೆ ಕೆಟ್ಟಂತೆ ಮಾತಾಡ್ತಾರೆ: ಶಾಸಕ ಬಾಲಕೃಷ್ಣ

ರಾಜ್ಯದಲ್ಲಿ ಸುಮಾರು 1900 ಅನಧಿಕೃತ ಶಾಲೆಗಳನ್ನು ಸರ್ಕಾರ ಗುರುತಿಸಿದ್ದು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಅದೇ ರೀತಿ ಶಿವಮೊಗ್ಗದಲ್ಲೂ ಹಲವಾರು ಈ ರೀತಿಯ ಅನಧಿಕೃತ ಶಾಲೆಗಳಿರುವುದು ಗಮನಕ್ಕೆ ಬಂದಿದೆ. ಜುಲೈ 1 ರೊಳಗೆ ಅನಧಿಕೃತ ಶಾಲೆಗಳಿಗೆ ನೋಟೀಸ್ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ನೀಟ್ ಗೆ ಸಂಬಂಧಿಸಿದಂತೆ ರಾಜ್ಯದ ಆಯ್ದ ಕಾಲೇಜುಗಳಲ್ಲಿ ಸರ್ಕಾರದ ವತಿಯಿಂದ ಉಚಿತವಾಗಿ ನೀಟ್ ತರಬೇತಿ ನೀಡುವ ಕ್ರಮ ಕೈಗೊಳ್ಳಲಾಗುವುದು. ಬಡ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗುವುದು ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES