ಬೆಂಗಳೂರು: ಪ್ರಜ್ವಲ್ ರೇವಣ್ಣ ಎಸ್ಐಟಿ ತನಿಖೆಗೆ ಸ್ಪಂದಿಸುತ್ತಾರೆ ಎಂದು ಅವರ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಭೇಟಿ ಮಾಡಿಬಂದ ಬಳಿಕ ವಕೀಲ ಅರುಣ್ ಮಾದ್ಯಮದವರೊಂದಿಗೆ ಮಾತನಾಡಿ, ಪ್ರಜ್ವಲ್ ವಿರುದ್ದ ಹೊಳೆನರಸೀಪುರ ಟೌನ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಂಧನಮಾಡಲಾಗಿದೆ. ಈ ಬಗ್ಗೆ ಮೀಡಿಯಾದಲ್ಲಿ ನೆಗೆಟಿವ್ ಕ್ಯಾಂಪೆನ್ ಬೇಡ. ನಾವು ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗುತ್ತೆ. ನಂತರ ರೆಗ್ಯುಲರ್ ಬೇಲ್ ಗೆ ಅರ್ಜಿ ಹಾಕ್ತೀವಿ ಎಂದು ವಕೀಲ ಅರುಣ್ ಹೇಳಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಜ್ವಲ್: ವಶಕ್ಕೆ ಪಡೆದ SIT ತಂಡ
ರಾತ್ರಿ ಬಂದಿದ್ದೀನಿ, ಇಲ್ಲಿದ್ದೀನಿ. ತನಿಖೆಗೆ ಸಹಕಾರ ಕೊಟ್ಟಿದ್ದೀನಿ. ನಾನು ಸ್ವಯಂ ಪ್ರೇರಿತವಾಗಿಯೇ ಬಂದಿದ್ದೀನಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ ಎಂದು ಅರುಣ್ ಹೇಳಿದ್ದಾರೆ. ಬೇಲ್ ಅಪ್ಲಿಕೇಶನ್ ಪೆಂಡಿಂಗ್ ಇದೆ. ಅದರ ಬಗ್ಗೆ ಮಾತಾಡಲ್ಲ. ತನಿಖೆಗೆ ಸಹಕಾರ ಕೊಡ್ತಾರೆ ಎಂದು ಪ್ರಜ್ವಲ್ ಪರ ವಕೀಲ ಅರುಣ್ ಹೇಳಿಕೆ ನೀಡಿದ್ದಾರೆ.