ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳ ಪೆನ್ಡ್ರೈವ್ ಸುದ್ದಿ ಪವರ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಏ.26ರಂದು ಮತದಾನ ಮಾಡಿದ ಬಳಿಕ ಜರ್ಮನಿಗೆ ಹಾರಿದ್ದ ಪ್ರಜ್ವಲ್ ಇದೀಗ ಬಂಧನದ ಭೀತಿಯಿಂದ ಜರ್ಮನಿಯಿಂದಲೂ ಕಾಲ್ಕಿತ್ತಿದ್ದು, ಲಂಡನ್ಗೆ ಹೋಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಇಂಗ್ಲೆಂಡ್ನಲ್ಲಿನ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಅವರ ಇಬ್ಬರು ಗೆಳೆಯರು ರೈಲು ಮೂಲಕ ಜರ್ಮಿನಿಯ ಮ್ಯೂನಿಚ್ ಲಂಡನ್ಗೆ ಹೋಗಿರುವ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ದುಬೈ ಮೂಲದ ಒರ್ವ ಮತ್ತು ಬೆಂಗಳೂರು ಮೂಲದ ಒರ್ವ ಸ್ನೇಹಿತ ಪ್ರಜ್ವಲ್ ರೇವಣ್ಣ ಅವರ ಜೊತೆ ಇದ್ದಾರೆ. ಮೂರು ಮಂದಿ ಒಟ್ಟಿಗೆ ಲಂಡನ್ಗೆ ಹೋಗಿರುವ ಸಾಧ್ಯೆತೆ ಇದೆ. ಇನ್ನು ಪ್ರಜ್ವಲ್ ರೇವಣ್ಣ ಕೆಳದ 20 ದಿನಗಳಿಂದ ಕುಟುಂಬದ ಸಂಪರ್ಕದಲ್ಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ: ಮಾಜಿ ಪ್ರಧಾನಿ ದೇವೇಗೌಡ ಫಸ್ಟ್ ರಿಯಾಕ್ಷನ್
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಅಂದರೆ ಜೂನ್ 4ರ ನಂತರ ಪ್ರಜ್ವಲ್ ಭಾರತಕ್ಕೆ ಬರಬಹುದು ಎಂದು ವರದಿಯಾಗಿತ್ತು. ಮತ್ತೊಂದೆಡೆ, ವಾಪಸಾಗುವಂತೆ ಕುಟುಂಬಸ್ಥರಿಂದ ಪ್ರಜ್ವಲ್ಗೆ ಒತ್ತಡ ಹೆಚ್ಚಾಗಿದೆ ಎಂದೂ ಇತ್ತೀಚೆಗೆ ವರದಿಯಾಗಿತ್ತು.