Saturday, July 13, 2024

ನಮ್ಮ ಮೆಟ್ರೋದಲ್ಲಿ ಯುವಕನ ‘ರೀಲ್ಸ್’​​​ ಚೇಷ್ಟೆ..!

ದೆಹಲಿ ಮೆಟ್ರೋದಲ್ಲಿ ʼRRR’ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ”ಗೆ ಯುವಕನೊಬ್ಬ ಹುಚ್ಚನಂತೆ ಡ್ಯಾನ್ಸ್‌ ಮಾಡಿ ಹುಚ್ಚಾಟ್ಟ ಮೆರೆದಿದ್ದಾನೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಸಚಿನ್ ಎಂಬ ವ್ಯಕ್ತಿ ಬ್ಲೂ ಲೈನ್ ದೆಹಲಿ ಮೆಟ್ರೋದಲ್ಲಿ ನಟರಾದ ರಾಮ್ ಚರಣ್ ಮತ್ತು ಜೂನಿಯರ್ NTR ಅವರು ನಟಿಸಿದ ‘RRR’ ಚಿತ್ರದ ಜನಪ್ರಿಯ ಹಾಡಾದ “ನಾಚೋ ನಾಚೋ”ಗೆ ಉತ್ಸಾಹದಿಂದ ಡ್ಯಾನ್ಸ್ ಮಾಡಿದ್ದಾನೆ.

ಈ ವೈರಲ್ ವಿಡಿಯೊದಲ್ಲಿ ಸಚಿನ್ ಮೆಟ್ರೋ ರೈಲಿನಲ್ಲಿ ಮಧ್ಯದಲ್ಲಿ ನಿಂತು ಹಾಡಿಗೆ ಉತ್ಸಾಹದಿಂದ ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ಮೊದಲು ನಾವು ನೋಡಬಹುದು. ನಂತರ ಇಂದ್ರಪ್ರಸ್ಥ ನಿಲ್ದಾಣದಲ್ಲಿ ಮೆಟ್ರೋ ನಿಂತು ಬಾಗಿಲು ತೆರೆಯುತ್ತಿದ್ದಂತೆ, ಅವನು ಪ್ಲಾಟ್‍ಫಾರ್ಮ್​​ನಿಂದ ಹೊರಗೆ ಓಡಿಹೋಗಿ ಕುಳಿದು ಮತ್ತೆ ಬೋಗಿಗೆ ಪ್ರವೇಶಿಸಿ ಡ್ಯಾನ್ಸ್ ಮಾಡುತ್ತಾನೆ. ಇದು ಅವನ ಸ್ನೇಹಿತರು ಮತ್ತು ಸಹ ಪ್ರಯಾಣಿಕರಿಗೆ ಆಶ್ಚರ್ಯ ಮತ್ತು ಮನರಂಜನೆಯನ್ನು ನೀಡುತ್ತದೆ. ಕೆಲವರು ಈ ಡ್ಯಾನ್ಸ್ ನೋಡಿ ಸುಮ್ಮನಿದ್ದರೆ ಕೆಲವರ ಮುಖದಲ್ಲಿ ನಗು ಮೂಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಕುಮಾರಸ್ವಾಮಿ ಜನತಾ ದರ್ಶನಕ್ಕೆ ಸರ್ಕಾರಿ ಅಧಿಕಾರಿಗಳು ಗೈರು: ಹೆಚ್​ಡಿಕೆಗೆ ಇರಿಸುಮುರಿಸು

ಈ ಪೋಸ್ಟ್ ಕೆಲವು ದಿನಗಳ ಹಿಂದೆ ಹಂಚಿಕೊಳ್ಳಲಾಗಿದ್ದು, ಇದಕ್ಕೆ 13.8 ಮಿಲಿಯನ್ ವೀವ್ಸ್ ಹಾಗೂ ಒಂದು ಮಿಲಿಯನ್ ಲೈಕ್ಸ್ ಬಂದಿದೆ. ಸಚಿನ್ ಡ್ಯಾನ್ಸ್‌ಗೆ ಹಲವು ನೆಟ್ಟಿಜನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

View this post on Instagram

 

A post shared by PRANKSTER SACHIN (@laughwithsachin)

RELATED ARTICLES

Related Articles

TRENDING ARTICLES