Friday, September 20, 2024

ಕರಾಳ ಶುಕ್ರವಾರ! : ಉತ್ತರ ಕನ್ನಡದಲ್ಲಿ ಹೊಳೆಯಲ್ಲಿ ಮುಳುಗಿ ಇಬ್ಬರು ಸಾವು

ಕಾರವಾರ : ರಾಜ್ಯಕ್ಕೆ ಇಂದು ಕರಾಳ ಶುಕ್ರವಾರ! ರಾಮನಗರದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಮಾಸುವ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೊಂದು ಅಂತಹದ್ದೇ ದುರ್ಘಟನೆ ನಡೆದಿದೆ. ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಜಲಸಮಾಧಿಯಾಗಿದ್ದಾರೆ.

ಹೊಳೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

ಸೂರಜ್ ನಾಯ್ಕ್ (15) ಹಾಗೂ ಪಾರ್ವತಿ ಶಂಕರ ನಾಯ್ಕ (35) ಮೃತ ದುರ್ದೈವಿಗಳು. ಮೃತರು ಕಂಡೆಕೋಡ್ಲು ನಿವಾಸಿಗಳು ಎಂದು ತಿಳಿಸುಬಂದಿದೆ.

15ಕ್ಕೂ ಹೆಚ್ಚು ಜನ ಸೇರಿ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಸ್ನಾನ ಮಾಡುವಾಗ ಇಬ್ಬರು ನೀರುಪಾಲಾಗಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಸಿಡಿಲು ಬಡಿದು ಬಾಲಕಿ ಸಾವು

ಸಿಡಿಲು ಬಡಿದು ಬಾಲಕಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜಾಡರ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಭಾಗ್ಯಶ್ರೀ (16) ಮೃತ ದುರ್ದೈವಿ. ಈಕೆ ಮಲ್ಲಾಪುರ ಪಿ.ಎಲ್. ಗ್ರಾಮದ ನಿವಾಸಿ.

ಮೃತ ಭಾಗ್ಯಶ್ರೀ ಪೋಷಕರ ‌ಜೊತೆ ಹೊಲದಲ್ಲಿ‌ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಸಿಡಿಲು‌ ಬಡಿದು ಪೋಷಕರ ಎದುರೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಲೋಕಾಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES