ಬೆಂಗಳೂರು: ಕಾನೂನು ಬಾಹಿರವಾಗಿ ಹೆಣ್ಣು ಮಗುವೊಂದನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್ ಗೌಡಗೆ ಬಿಗ್ ರಿಲೀಫ್ ಸಿಕ್ಕಿದೆ.
ಈ ಪ್ರಕರಣ ಸಂಬಂಧ ನಿನ್ನೆ ವಿಚಾರಣೆ ನಡೆಸಿದ ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಲಯ ಸೋನು ಗೌಡಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಕೋರ್ಟ್ ಷರತ್ತು ಪೂರ್ಣಗೊಳಿಸಲು ತಡವಾದ ಹಿನ್ನೆಲೆ ಜಾಮೀನು ಸಿಕ್ಕರೂ ಸೋನುಗೌಡ ನಿನ್ನೆ ರಿಲೀಸ್ ಆಗಿರಲಿಲ್ಲ.
ನ್ಯಾಯಾಲಯದ ಆದೇಶದ ಅನ್ವಯ ಸೋನು ಶ್ರೀನಿವಾಸ್ ಗೌಡ ಅವರು ಇಂದು ಜೈಲಿನಿಂದ ಬಿಡುಗಡೆಯಾಗುತ್ತಾರೆ. ಸೋನು ಶ್ರೀನಿವಾಸ್ ಗೌಡ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ CJM ನ್ಯಾಯಾಲಯ ಆದೇಶ ನೀಡಿತ್ತು
JJ ಕಾಯ್ದೆ ಅಡಿ ಸೋನು ಗೌಡ ಅರೆಸ್ಟ್
ಸೋನು ಶ್ರೀನಿವಾಸ್ ಗೌಡ ಉತ್ತರ ಕರ್ನಾಟಕದ 8 ವರ್ಷದ ಬಾಲಕಿಯನ್ನು ದತ್ತು ತೆಗೆದುಕೊಂಡಿದ್ದರು. ಈ ವಿಷಯವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಕಾನೂನು ಉಲ್ಲಂಘಿಸಿದ್ದಕ್ಕೆ ಮಕ್ಕಳ ಕಲ್ಯಾಣ ಇಲಾಖೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಮಕ್ಕಳ ಆರೈಕೆ ಹಾಗೂ ರಕ್ಷಣೆ (JJ ಕಾಯ್ದೆ) ಕಾಯ್ದೆ ಅಡಿಯಲ್ಲಿ ಸೋನು ಗೌಡ ಅರೆಸ್ಟ್ ಆಗಿದ್ದರು.