Friday, September 20, 2024

ಧೂಮಪಾನ ಪ್ರಿಯರಿಗೆ ಶಾಕ್!: ಸ್ಮೋಕಿಂಗ್ ಝೋನ್​ ತೆರವಿಗೆ ಪೊಲೀಸ್ ಕಮಿಷನರ್ ಸೂಚನೆ!

ಬೆಂಗಳೂರು : ಧೂಮಪಾನ ಪ್ರಿಯರಿಗೆಂದೇ ನಿರ್ಮಾಣ ಮಾಡಿರುವ ಸ್ಮೋಕಿಂಗ್​ ಝೋನ್​ ಗಳನ್ನು ತೆರವುಗೊಳಿಸುವಂತೆ ಪೊಲೀಸ್​ ಕಮಿಷನರ್​ ಬಿ.ದಯಾನಂದ್​ ಅವರು ಆದೇಶ ನೀಡಿದ್ದಾರೆ.

ಬೆಂಗಳೂರು ನಗರದಾದ್ಯಂತ ಇರುವ ಎಲ್ಲಾ ಹೋಟೆಲ್​ಗಳು, ಬಾರ್​ಗಳು, ರೆಸ್ಟೋರೆಂಟ್​ಗಲ್ಲಿ ಧೂಮಪಾನ ಪ್ರಿಯರಿಗೆಂದು ನಿಗಧಿತ ಧೂಮಪಾನ ಸ್ಥಳಗಳು ಅಥವಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಈ ಕುರಿತು ಪೊಲೀಸ್​ ಆಯುಕ್ತರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ, ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ (COTPA) 2003 ರಲ್ಲಿ ವಿವರಿಸಿರುವ ನಿಬಂಧನೆಗಳನ್ನು ಕಟ್ಟುನಿಟ್ಟಾದ ಅನುಸರಣೆ ಹಾಗೂ GSR-500(E) COTPA 2017 ಅಧಿಸೂಚನೆ ಅಡಿಯಲ್ಲಿ ನಿರ್ಧಿಷ್ಟಪಡಿಸಿರುವ ತಿದ್ದುಪಡಿಗಳ ಹಿನ್ನೆಲೆಯಲ್ಲಿ COTPA ರೂಪಿಸಿರುವ ಹೊಗೆ-ಮುಕ್ತ ಕಾನೂನುಗಳ ಉಲ್ಲಂಘನೆಯಿಂದ ಯುವಕರು, ಮಕ್ಕಳು, ವಯಸ್ಕರು ಮತ್ತು ಸ್ಥಳೀಯ ನೌಕರರು ಹಾನಿಕಾರಕ ರಾಸಾಯನಿಕ ಮತ್ತು ಕ್ಯಾನ್ಸರ್‌ಕಾರಕ ಅಪಾಯಗಳಿಗೆ ತುತ್ತಾಗುತ್ತಿರುವುದು ಬೆಂಗಳೂರು ನಗರ ಮನಗಂಡಿದೆ.

ಇದನ್ನೂ ಓದಿ: ಮೈಸೂರು-ಕೊಡಗು ಜನತೆಗೊಂದು ಮೈಸೂರು ರಾಜ ಯದುವೀರ್ ಪತ್ರ

ಬೆಂಗಳೂರು ನಗರಾದ್ಯಂತ ಇರುವ ಎಲ್ಲಾ ಹೋಟೆಲ್‌ಗಳು, ಬಾರ್‌ಗಳು, ರೆಸ್ಟೋರೆಂಟರ್‌ಗಳು ನಿಗಧಿತ ದೂಮಪಾನ ಸ್ಥಳಗಳು ಅಥವಾ ಕೊಠಡಿಗಳನ್ನು ತೆರವುಗೊಳಿಸಲು ಧೂಮಮುಕ್ತ ಕಾನೂನುಗಳನ್ನು ಪಾಲಿಸಲು ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿದೆ.

1. ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ನಿಷೇಧ ನಿಯಮಗಳು 2008 ರ ಮೂಲಕ ನಿರ್ಧಿಷ್ಟಪಡಿಸಿರುವ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಗಧಿತ ಧೂಮಪಾನ ಸ್ಥಳಗಳನ್ನು (DSA) ನಿಗಧಿಪಡಿಸಬೇಕು.

ಧೂಮಪಾನಿಗಳಲ್ಲದವರು ಧೂಮಪಾನದ ಹೊಗೆಯ ಅಪಾಯಕ್ಕೆ ಒಳಗಾಗುವುದಿಲ್ಲ ಹಾಗೂ ಸಮರ್ಪಕವಾದ ವಾತಾಯನ ವ್ಯವಸ್ಥೆಯಿದೆ ಎಂದು ಖಚಿತ ಪಡಿಸಿಕೊಂಡು, COTPA ಮಾರ್ಗಸೂಚಿಗಳ ಅನ್ವಯ ನಿಗಧಿತ ಧೂಮಪಾನ ಸ್ಥಳಗಳನ್ನು (DSA) ಗುರುತಿಸಬೇಕು. ಈ ಸ್ಥಳ ಮತ್ತು ವಿನ್ಯಾಸವು ನಿರಾಪೇಕ್ಷಣಾ ಪತ್ರದಲ್ಲಿ ನಮೂದಿಸಿರುವ ಮಾನದಂಡಗಳು ಮತ್ತು ಸೂಚನೆಗಳಿಗೆ ಕಡ್ಡಾಯವಾಗಿ ಬದ್ಧವಾಗಿರಬೇಕು.

2. ನಿಗದಿತ ಧೂಮಪಾನ ಸ್ಥಳ (DSA) ಗಳಲ್ಲಿ ಸೇವೆಗಳ ನಿಷೇಧ:

ನಿಗದಿತ ಧೂಮಪಾನ ಸ್ಥಳ (DSA) ಗಳಲ್ಲಿ ಆಹಾರ, ನೀರು, ಪಾನೀಯಗಳು ಅಥವಾ ಯಾವುದೇ ತಂಬಾಕು ಉತ್ಪನ್ನಗಳನ್ನು ಒದಗಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂಬುದು ಗಮನಾರ್ಹವಾಗಿದೆ. ಧೂಮಪಾನಿಗಳಿಗೆ ನಿಗದಿತ ಧೂಮಪಾನ ಸ್ಥಳ (DSA) ಗಳಲ್ಲಿ ಅನುಕೂಲಗಳನ್ನು ಸೀಮಿತಗೊಳಿಸುವ ಮೂಲಕ ಧೂಮಪಾನದ ಬಗೆಗೆ ನಿರಾಸಕ್ತಿ ಮೂಡುವಂತೆ ಮಾಡುವುದು ಮತ್ತು ಧೂಮಪಾನಿಗಳಲ್ಲದವರನ್ನು (ಸಿಬ್ಬಂದಿ ಸೇರಿದಂತೆ) ಹಾನಿಕಾರಕ ತಂಬಾಕು ಹೊಗೆಯಿಂದ ರಕ್ಷಿಸುವುದು ಈ ನಿಯಂತ್ರಣದ ಮೂಲ ಉದ್ದೇಶವಾಗಿದೆ.

3. ಸೂಚನಾ ಪಲಕಗಳು ಮತ್ತು ಜಾಗೃತಿ:

ಸ್ಥಳದ ಮಾಲೀಕರು ಮತ್ತು ಜವಾಬ್ದಾರಿಯುತ ನಿರ್ವಾಹಕರುಗಳು ನಿಗದಿತ ಧೂಮಪಾನ ಸ್ಥಳ (DSA) ಗಳಲ್ಲಿ ಆಹಾರ ಮತ್ತು ಪಾನಿಯಗಳ ಸೇವನೆಗಳು ಲಭ್ಯವಿಲ್ಲದಿರುವ ಬಗೆಗೆ ಸ್ಪಷ್ಟವಾದ ಅರಿವು ಹೊಂದಿರಬೇಕು. ಈ ಬಗೆಗೆ ಸೂಚನಾ ಪಲಕಗಳನ್ನು ಸ್ಪಷ್ಟವಾಗಿ ಗೋಚರಿಸುವಂತೆ ಅಳವಡಿಸಬೇಕು.

4. ಜಾರಿ ಮತ್ತು ಅನುಸರಣೆ:-(Enforcement and Compliance)

ಮೇಲೆ ವಿವರಿಸಿದ ಮಾನದಂಡಗಳು ಸ್ಪಷ್ಟವಾಗಿ ಪಾಲನೆ ಆಗುತ್ತಿರುವ ಬಗೆಗೆ ಸಂಬಂಧಪಟ್ಟ ಅಧಿಕಾರಿಗಳು ನಿಯಮಿತವಾಗಿ ತಪಾಸಣೆ ನಡೆಸಬೇಕು ಮತ್ತು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

A. СОТРА 2003 ಮತ್ತು ಸಂಬಂಧಿತ ತಿದ್ದುಪಡಿ ನಿಯಮಗಳ ಅನ್ವಯ ದಂಡ ವಿಧಿಸುವುದು/ಸೆರೆವಾಸ ಶಿಕ್ಷೆ.

B. ಸಂಬಂಧಿತ BBMP ಸುತ್ತೋಲೆಗಳು ಅಥವಾ ಇತರೆ ಪುರಸಭೆ ಮಾರ್ಗಸೂಚಿಗಳ ಅನ್ವಯ ಪರವಾನಿಗೆಯನ್ನು ರದ್ದುಗೊಳಿಸುವುದು. ಎಂದು ಆದೇಶಿಸುವ ಮೂಲಕ ಬೆಂಗಳೂರು ನಗರಾದ್ಯಂತ ನಿರ್ಮಾಣವಾಗಿರುವ ಸ್ಮೋಕಿಂಗ್ ಝೋನ್​ ಗಳಿಗೆ ಖಡಕ್​ ಎಚ್ಚರಿಕೆ ನೀಡಿದೆ.

RELATED ARTICLES

Related Articles

TRENDING ARTICLES