ಬೆಂಗಳೂರು : ರೋಗಿಗಳಿಗೆ ಸುಸಜ್ಜಿತ ಆರೋಗ್ಯ ಸೇವೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಗಳು ಇದೀಗ ಆಟೋ ನಿಲ್ದಾಣವಾಗಿ ಬದಲಾಗ್ತಿದೆ.
ಇದಕ್ಕೆ ಕೈ ಗನ್ನಡಿಯಂತಿರೋದು ಸಿಲಿಕಾನ್ ಸಿಟಿಯ ಈ ಪ್ರಮುಖ ಆಸ್ಪತ್ರೆ. ಹಾಗಿದ್ರೆ, ಏನೀದು ಆಟೋ ಸ್ಟಾಂಡ್ ಕಥೆ? ಯಾವುದು ಈ ಆಸ್ಪತ್ರೆ ಅಂತಿರಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೆಲ್ಸ್.
ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಆಟೋಗಳು. ಆಂಬುಲೆನ್ಸ್ ಚಾಲಕರೊಂದಿಗೆ ಕಿರಿಕ್. ಆಸ್ಪತ್ರೆ ಆವರಣದ ತುಂಬೆಲ್ಲಾ ಆಟೋ ಪಾರ್ಕಿಂಗ್ ಮಾಡಿಕೊಂಡು ಮಜವಾಗಿ ಕೂತಿರೋ ಚಾಲಕರು. ಈ ಇಕ್ಕಟಿನಲ್ಲಿ ರಸ್ತೆ ದಾಟಲು ಪರದಾಡುತ್ತಿರೋ ರೋಗಿಗಳು. ಇದೆಲ್ಲಾ ಕಂಡು ಬಂದಿದ್ದು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ.
ಆಸ್ಪತ್ರೆ ಆವರಣದಲ್ಲೇ ಬಿಡಾರ
ಕೆ.ಸಿ. ಜನರಲ್ ಆಸ್ಪತ್ರೆ ಆಟೋ ನಿಲ್ದಾಣವಾಗಿ ಬದಲಾಗುತ್ತಿದೆ. ಆಟೋ ಸ್ಟಾಂಡ್ನಲ್ಲಿ ಇರಬೇಕಾದ ಆಟೋಗಳು ಆಸ್ಪತ್ರೆ ಆವರಣದಲ್ಲಿ ಬಿಡಾರ ಬಿಟ್ಟಿವೆ. ಇನ್ನು, ರೋಗಿಗಳನ್ನು ಆಸ್ಪತ್ರೆಗೆ ಡ್ರಾಪ್ ಮಾಡಲು ಬಂದ ಆಟೋಗಳು ಹೊಸ ಬಾಡಿಗೆ ಹುಡಿಕಾಟಕ್ಕಾಗಿ ಅಲ್ಲಿಯೇ ವಾಸ್ತವ್ಯ ಹೂಡಿವೆ.
ರೋಗಿಗಳು ರಸ್ತೆ ದಾಟಲು ಪರದಾಟ
ಆಟೋ ಚಾಲಕರ ಈ ನಡೆಯು ರೋಗಿಗಳಿಗೂ ತೊಂದರೆ ನೀಡುತ್ತಿದೆ. ಆಟೋಗಳ ವೇಗದ ಮಿತಿ ಇಲ್ಲದೆ ಆಸ್ಪತ್ರೆ ಆವರಣದ ಕಿರುದಾದ ರಸ್ತೆಯಲ್ಲಿ ಸಂಚಾರಿಸುವುದರಿಂದ ರೋಗಿಗಳು ರಸ್ತೆ ದಾಟಲು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಸುದ್ದಿ ಓದಿದ್ದಿರಾ? : ಅಭಿವೃದ್ಧಿ ನೆಪದಲ್ಲಿ ಕೆ.ಆರ್. ಪುರ ಆಸ್ಪತ್ರೆ ಆವರಣದಲ್ಲಿ ಮರಗಳ ಮಾರಣ ಹೋಮ?
ಪುಟ್ಟ ಮಕ್ಕಳ ಜೀವಕ್ಕೆ ಆಟೋಗಳೇ ಶತ್ರುಗಳು
ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಪುಟ್ಟ ಮಕ್ಕಳ ಜೀವಕ್ಕೆ ಆಟೋಗಳೇ ಶತ್ರುಗಳಂತ ಕಾಣುತ್ತಿದೆ. ಈ ಸಮಸ್ಯೆ ಆರೋಗ್ಯ ಇಲಾಖೆ ಗಮನಕ್ಕೆ ಬಂದಿದ್ದು ಆಟೋ ಚಾಲಕರ ಈ ಉದ್ದಟತನಕ್ಕೆ ಬ್ರೇಕ್ ಹಾಕಲು ಇಲಾಖೆ ಮುಂದಾಗಿದೆ. ಆಸ್ಪತ್ರೆ ಆವರದಲ್ಲಿ ಪಾರ್ಕಿಂಗ್ ಮಾಡುವ ಆಟೋ ಚಾಲಕರಿಗೆ ಆದಷ್ಟು ಬೇಗ ನೋಟಿಸ್ ನೀಡಲು ಚಿಂತನೆ ನಡೆಸಿದೆ.
ಒಟ್ನಲ್ಲಿ, ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ಆಟೋ ಹಾವಳಿ ಜೋರಾಗಿದ್ದು, ಇದಕ್ಕೆ ಲಗಾಮು ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿ ಆಗುತ್ತಾ? ಎನ್ನುವುದನ್ನು ಕಾದುನೋಡಬೇಕಿದೆ.