Saturday, May 18, 2024

ಅಭಿವೃದ್ಧಿ ನೆಪದಲ್ಲಿ ಕೆ.ಆರ್. ಪುರ ಆಸ್ಪತ್ರೆ ಆವರಣದಲ್ಲಿ ಮರಗಳ ಮಾರಣ ಹೋಮ?

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಸಿರು ನಾಶವಾಗಿ ಕಾಂಕ್ರೀಟ್ ಕಾಡಾಗಿ ಬದಲಾಗಿದೆ. ಈ ಮಧ್ಯೆ ಅಳಿದುಳಿದ ಮರಗಳಿಗೂ‌ ಅಭಿವೃದ್ಧಿಯ ನೆಪದಲ್ಲಿ‌ ಉಳಿಗಾಲವಿಲ್ಲದಂತಾಗಿದೆ. ಕಾಮಗಾರಿ ನೆಪದಲ್ಲಿ ಪದೇ ಪದೆ ಮರಗಳ ಮಾರಣ ಹೋಮವಾಗ್ತಿದ್ದು. ಈಗ ಕೆ.ಆರ್. ಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಮರಗಳಿಗೆ ಕಾಮಗಾರಿ ನೆಪದಲ್ಲಿ ಕೊಡಲಿ ಏಟು ಹಾಕಲು ಸಿದ್ಧತೆ ನಡೆದಿದೆ.

ಕಾಮಗಾರಿ ನೆಪದಲ್ಲಿ ಕೆ.ಆರ್ ಪುರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮರಗಳ ಮಾರಣಹೋಮ ಮಾಡಲು ಅಧಿಕಾರಿಗಳುಬಮುಂದಾಗಿದ್ದಾರೆ ಎಂದು ವೃಕ್ಷ ಪ್ರೇಮಿಗಳು ಆರೋಪ ಮಾಡಿದ್ದಾರೆ. ಕೆ.ಆರ್.‌ಪುರ ಸಾರ್ವಜನಿಕ‌ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಮತ್ತವರ ಸಂಬಂಧಿಕರಿಗೆ ಹಲವು ದಶಕದಿಂದ ಈ ಮರಗಳು ನೆರಳಾಗಿದ್ದಾವೆ.‌ ನೋವಿನ‌ ನಡುವೆ ಈ‌ ಜಾಗ ನೆಮ್ಮದಿಯಾ ತಾಣವಾಗಿದೆ.‌ ಆದ್ರೆ, ಈಗ ಅಭಿವೃದ್ಧಿ ನೆಪದಲ್ಲಿ ಈ‌ ಮರಗಳ‌ ಕಡಿಯಲು ಆಸ್ಪತ್ರೆಯ ಅಧಿಕಾರಿಗಳ ಮುಂದಾಗಿರೋದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ‌ ಕಾರಣವಾಗಿದೆ.

100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ

ಕೆ.ಆರ್. ಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.‌ ಇದರ‌ ಜೊತೆ ಶವಾಗಾರ ಕಟ್ಟಡ ನಿರ್ಮಾಣಕ್ಕೂ ಸಿದ್ಧತೆ ನಡೆಸಿದ್ದು, ಸರ್ಕಾರದಿಂದ ಅನುಮೋದನೆಯೂ ದೊರೆತಿದೆ.‌ ಆದರೆ, ಶವಾಗಾರ ನಿರ್ಮಾಣಕ್ಕೆ ನಿಗದಿಪಡಿಸಲಾಗಿರುವ ಜಾಗದಲ್ಲಿ 70ಕ್ಕೂ ಮರಗಳಿವೆ.

ಬಿಬಿಎಂಪಿಗೆ ಪತ್ರ ಬರೆದ ಆಸ್ಪತ್ರೆ ಅಧಿಕಾರಿಗಳು

ಅವುಗಳ ತೆರವಿಗೆ ಒಪ್ಪಿಗೆ ನೀಡುವಂತೆ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಗಳು ಬಿಬಿಎಂಪಿ ಅರಣ್ಯ ವಿಭಾಗಕ್ಕೆ ಪತ್ರ ಬರೆದಿದ್ದಾರೆ. ಈ ನಿರ್ಧಾರಕ್ಕೆ ವೃಕ್ಷ  ಪ್ರೇಮಿಗಳು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ವಿಚಾರ ಆರೋಗ್ಯ ಇಲಾಖೆ ಮುಖ್ಯ ಆಯುಕ್ತರ ಗಮನಕ್ಕೆ ತರುತಿದಂತೆ ಇದರ ಬಗ್ಗೆ ಪರೀಶಿಲಾನೆ ನಡೆಸಲು ಮುಂದಾಗಿದ್ದಾರೆ.

ಸರ್ಕಾರ ಮರ ಕಡಿಯುವ ನಿರ್ಧಾರ ಕೈಬಿಡುತ್ತಾ?

ಅತ್ತ ಸರ್ಕಾರ ಕಾಡು ಬೆಳೆಸಿ ನಾಡು ಉಳಿಸಿ ಅನ್ನುತ್ತೆ. ಆದ್ರೆ, ಇತ್ತ ಇದೇ ಸರ್ಕಾರದ ಭಾಗವಾಗಿರುವ ಅಧಿಕಾರಿಗಳು ಅಭಿವೃದ್ಧಿಯ ಹೆಸರಲ್ಲಿ ಮರಗಳನ್ನು ಕಡಿಯಲು ಮುಂದಾಗಿದ್ದಾರೆ. ಇತ್ತ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದು ಜನರ ಆಕ್ರೋಶ ಮಣಿದು ಸರ್ಕಾರ ಮರ ಕಡಿಯುವ ನಿರ್ಧಾರ ಕೈಬಿಡುತ್ತಾ ಎಂದು ಕಾದುನೋಡಬೇಕಿದೆ.‌

RELATED ARTICLES

Related Articles

TRENDING ARTICLES