Monday, December 23, 2024

ಮಾಜಿ ಶಾಸಕ ನಾಗನಗೌಡ ಕಂದಕೂರ ನಿಧನ!

ಯಾದಗಿರಿ: ಗುರುಮಠಕಲ್​ ನ ಮಾಜಿ ಶಾಸಕ ನಾಗನಗೌಡ ಕಂದಕೂರ (79) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಇಂದು ಮುಂಜಾನೆ ಹೃದಾಘಾತದಿಂದ ಯಾದಗಿರಿಯ ಶರಣು ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಹನುಮಧ್ವಜ ಗಲಾಟೆ: ಶಾಸಕ ರವಿ ಗಣಿಗ ಸ್ಪಷ್ಟನೆ! 

2018ರಲ್ಲಿ ಜೆಡಿಎಸ್​ ನಿಂದ ಸ್ಫರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಜನಮಣ್ಣನೆ ಗಳಿಸಿದ್ದರು. 2023 ರಲ್ಲಿ ವಯಸ್ಸಿನ ಕಾರಣದಿಂದಾಗಿ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ಬಳಿಕ ತಮ್ಮ ಪುತ್ರ ಶರಣಗೌಡ ಕಂದಕೂರ ಅವರು ಗುರುಮಠಕಲ್ ಶಾಸಕರಾಗಿ ಆಯ್ಕೆಯಾದರು.

RELATED ARTICLES

Related Articles

TRENDING ARTICLES