ಹಾವೇರಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು, ಎಲ್ಲವೂ ಎಲ್ಲೆಡೆಯೂ ರಾಮಮಯ ಆಗ್ತಿದೆ.ಕೇಕ್ನಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದು ಜನಮನ ಸೆಳೆದಿದೆ.
ಹೌದು,ಶುಗರ್ ಪೇಸ್ಟ್ ಕೇಕ್ ನಲ್ಲಿ ರಾಮಮಂದಿರ ಬೇಕರಿಯ ಸಿಬ್ಬಂದಿ ಮಂದಿರ ನಿರ್ಮಾಣ ಮಾಡಿದ್ದಾರೆ. ಸುಮಾರು 40 ಸಾವಿರ ಖರ್ಚು ಮಾಡಿ 35 ಕೆಜಿ ಶುಗರ್ ಪೇಸ್ಟ್ ಕೇಕ್ ನಿಂದ ರಾಮ ಮಂದಿರ ನಿರ್ಮಿಸಿದ್ದಾರೆ.ಐದು ಜನರು ಸತತ ಐದು ದಿನಗಳ ಪರಿಶ್ರಮದಿಂದ ಶ್ರೀರಾಮಂದಿರದ ಪ್ರತಿಕೃತಿ ರಚಿಸಿ ಗಮನ ಸೆಳೆದಿದ್ದಾರೆ.ಎಲ್ಲರ ಗಮನ ಸೆಳೆಯುತ್ತಿದೆ.
ಜನವರಿ 22ರಂದು ಉತ್ತರ ಪ್ರದೇಶದ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಇತರೆ ರಾಮಮಂದಿರಗಳಲ್ಲೂ ವಿಶೇಷ ಪೂಜೆ-ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಇದನ್ನೂ ಓದಿ: ನಾಲಿಗೆಯಿಂದ ಮೂಡಿದ ಶ್ರೀರಾಮ
ಪರಾಣೆಬೆನ್ನೂರು ನಗರದ ಪ್ರವಾಸಿಮಂದಿರದ ವೃತ್ತದಲ್ಲಿರುವ ಬೇಕರಿ ಸಿಬ್ಬಂದಿ ಮಹಾಂತೇಶ್.ಟಿ ಇದರ ನಿರ್ಮಾತೃ. ಇವರು ಈ ‘ವಿಶಿಷ್ಟ ಕೇಕ್ ಅನ್ನು ಸುಮಾರು 5 ದಿನ ತೆಗೆದುಕೊಂಡು ತಯಾರಿಸಿದ್ದಾರೆ. ಅಂದಾಜು 20 ಕೆ.ಜಿ ಸಕ್ಕರೆಯ ಪೇಸ್ಟ್ ಅನ್ನು ಕೇಕ್‌ಗೆ ಬಳಸಲಾಗಿದೆ. ಇವರು ಕಳೆದ 15 ವರ್ಷಗಳಿಂದ ಕೇಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಸುಮಾರು 40 ಸಾವಿರ ರೂಪಾಯಿ ವ್ಯಯಿಸಿದ್ದಾರಂತೆ.
ಈ ಕಲಾಕೃತಿ ಶ್ರೀರಾಮ ಮಂದಿರ ಉದ್ಘಾಟನೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಸಿಗಲಿದೆ. ರಾಮನ ಭಕ್ತರೂ ಆಗಿರುವ ಮಹಾಂತೇಶ್ ಮುಂದಿನ ದಿನಗಳಲ್ಲಿ ಆಯೋಧ್ಯೆಗೆ ತೆರಳಿ ಮಂದಿರ ಕಣ್ಣುಂಬಿಕೊಳ್ಳುವುದಾಗಿಯೂ ತಿಳಿಸಿದರು.