Monday, November 25, 2024

ಚಳಿಗಾಲದಲ್ಲಿ ತಲೆಸ್ನಾನ ಮಾಡುವಾಗ ಈ ತಪ್ಪುಗಳನ್ನು ಮಾಡಲೇ ಬೇಡಿ

ಚಳಿಗಾಲದಲ್ಲಿ ನಾವು ಸ್ನಾನ ಮಾಡುವಾಗ ಈ ವಿಷ್ಯವನ್ನ ಗಮನದಲ್ಲಿ ಇಟ್ಟಿಕೊಂಡು ಸ್ನಾನ ಮಾಡಬೇಕು. ಈ ಕಾಲದಲ್ಲಿ ನಮ್ಮ ತ್ವಚೆ ತೇವವನ್ನು ಕಳೆದುಕೊಳ್ಳುವುದರಿಂದ ತುರಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ತಲೆಹೊಟ್ಟಿನ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಚಳಿಗಾಲದಲ್ಲಿ ನಿಮ್ಮ ಕೂದಲು ಹಾಗೂ ನೆತ್ತಿಯ ಆರೋಗ್ಯವನ್ನು ಕಾಪಾಡಲು ತಲೆಸ್ನಾನ ಮಾಡುವಾಗ ಈ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಆಗಾಗ್ಗೆ ಕೂದಲು ತೊಳೆಯಬೇಡಿ​: ಚಳಿಗಾಲದಲ್ಲಿ ಪ್ರತಿದಿನ ತಮ್ಮ ಕೂದಲನ್ನು ತೊಳೆಯಲು ಅನೇಕರು ಇಷ್ಟಪಡುತ್ತಾರೆ. ಆದರೆ ಹೀಗೆ ಮಾಡುವುದರಿಂದ ನೆತ್ತಿಯಲ್ಲಿರುವ ನೈಸರ್ಗಿಕ ಎಣ್ಣೆಯು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ನಿಮ್ಮ ನೆತ್ತಿ ಒಣಗುತ್ತದೆ. ಆದ್ದರಿಂದ, ಚಳಿಗಾಲದಲ್ಲಿ ಕೂದಲನ್ನು ವಾರಕ್ಕೆ 2 ರಿಂದ 3 ಬಾರಿ ಮಾತ್ರ ತೊಳೆಯಿರಿ.
  • ಕೊದಲಿಗೆ ಎಣ್ಣೆ ಹಚ್ಚಿ:  ನಿಮ್ಮ ಕೂದಲನ್ನು ತೊಳೆಯುವ ಮೊದಲು ನೀವು ಕೂದಲಿಗೆ ಎಣ್ಣೆ ಹಚ್ಚಬೇಕು.
  • ಎಣ್ಣೆಹಚ್ಚಿ ಹೆಚ್ಚಿನ ಸಮಯ ಬಿಡಬೇಡಿ: ಕೂದಲಿಗೆ ಎಣ್ಣೆಹಚ್ಚಿ ಹೆಚ್ಚು ಸಮಯ ಇಡಬೇಡಿ​ ಇದರಿಂದ ತಲೆಹೊಟ್ಉ ಹೆಚ್ಚುತ್ತದೆ.
  • ಅತಿ ಹೆಚ್ಚು ಬಿಸಿ ನೀರು ಬಳಸಬೇಡಿ: ನೀರಿನ ತಾಪಮಾನ​ ಕಡಿಮೆಯಿರಬೇಕು. ಉಗುರು ಬೆಚ್ಚನೆಯ ನೀರನ್ನು ಬಳಸಿ.
  • ಸೌಮ್ಯವಾದ ಶಾಂಪೂ ಬಳಸಿ​
  • ನೈಸರ್ಗಿಕ ಕಂಡಿಷನರ್ ಬಳಸಿ​

ಈ ಎಲ್ಲಾ ಅಂಶಗಲನ್ನು ನೆನಪಿನಲ್ಲಿಟ್ಟುಕೊಂಡು ನಾವು ಸೀಸನ್​ನಲ್ಲಿ ತಲೆಸ್ನಾನ ಮಾಡುವುದು ಮುಖ್ಯ ವಾಗುತ್ತದೆ.

 

RELATED ARTICLES

Related Articles

TRENDING ARTICLES