ಚಳಿಗಾಲ ಬಂತಂದ್ರೆ ಸಾಕು ಆರೋಗ್ಯ ಸಮಸ್ಯೆ ನಮ್ಮನ್ನು ಬಿಟ್ಟುಬಿಡದಂತೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಕೆಮ್ಮು ಮತ್ತು ಗಂಟಲು ನೋವು. ಅತಿ ಹೆಚ್ಚು.ಆದರೆ,ಈ ಸಮಸ್ಯೆ ನಿವಾರಣೆಗೆ ವೈದ್ಯರ ಬಳಿಯೇ ಹೋಗಬೇಕೆಂದಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಗ್ರಿಗಳನ್ನು ಬಳಸಿ ಔಷಧಿ ತಯಾರಿಸಿ ಕುಡಿದರೆ ಕೆಮ್ಮು, ಗಂಟಲು ನೋವು ಬೇಗ ಕಡಿಮೆಯಾಗುತ್ತದೆ.
ಅರಿಶಿಣ
ಉರಿಯೂತ ವಿರೋಧಿ ಮತ್ತು ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಅರಿಶಿನದಲ್ಲಿರುವುದರಿಂದ ಪ್ರತಿನಿತ್ಯ ನೀವು ಸೇವಿಸುವ ಟೀ ಗೆ ಅರಿಶಿನ ಸೇರಿಸಿ ಕುದಿಸಿ ಕುಡಿಯಿರಿ. ಅರಿಶಿನ ದೇಹದಲ್ಲಿ ಶಾಖವನ್ನು ಹೆಚ್ಚಿಸುವ ಮೂಲಕ ಚಳಿಗಾಲದಲ್ಲಿ ಉಂಟಾಗುವ ಕೆಮ್ಮು, ಗಂಟಲು ನೋವು ಸಮಸ್ಯೆಗಳನ್ನು ನಿವಾರಿಸುತ್ತದೆ.
ಶುಂಠಿ
ಚಳಿಗಾಲದಲ್ಲಿ ಶುಂಠಿ ಚಹಾ ಎಂದರೆ ಎಲ್ಲರಿಗೂ ಪ್ರಿಯ. ಸಾಧಾರಣ ಟೀ ಪುಡಿ ಜೊತೆ ಹಾಲಿಗೆ ಶುಂಠಿ ಜಜ್ಜಿ ಹಾಕಿ, ಕುದಿಸಿದರೆ ಮಸಾಲೆ ಚಹಾ ಅಥವಾ ಶುಂಠಿ ಚಹಾ ಸಿದ್ಧವಾಗುತ್ತದೆ. ಆ್ಯಂಟಿ ಆ್ಯಕ್ಸಿಡೆಂಟ್ ಅಂಶವಿರುವ ಶುಂಠಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಮ್ಮು, ಕಫ, ಗಂಟಲಲ್ಲಿ ಕಿರಿಕಿರಿ ಮುಂತಾದ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಕರಿಮೆಣಸು
ಬಹಳ ಹಿಂದಿನಿಂದಲೂ ಕೆಮ್ಮು, ಗಂಟಲು ಕಿರಿಕಿರಿಗೆ ಮನೆಮದ್ದಾಗಿ ಕರಿಮೆಣಸನ್ನು ಬಳಸಲಾಗುತ್ತದೆ. ಇದರಲ್ಲಿ ಪೊಟ್ಯಾಶಿಯಂ, ಮೆಗ್ನೇಶೀಯಂ, ಐರನ್, ವಿಟಮಿನ್ ಕೆ ಮತ್ತು ವಿಟಮಿನ್ ಸಿ ಅಂಶಗಳಿದ್ದು, ನೈಸರ್ಗಿಕ ಆ್ಯಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ನೀವು ಕುಡಿಯುವ ಟೀಗೆ ಸ್ವಲ್ಪ ಕರಿಮೆಣಸು ಬೆರೆಸಿ ಅಥವಾ ಹಾಲಿಗೆ ಕರಿಮೆಣಸಿನ ಪುಡಿ ಹಾಕಿ ಕುಡಿಸಿ ಪ್ರತಿನಿತ್ಯ ಕುಡಿದರೆ ಕೆಮ್ಮು ನಿವಾರಣೆಯಾಗುತ್ತದೆ.
ಪುದೀನಾ ಚಹಾ
ಪುದೀನಾ ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಆಹಾರಕ್ಕೆ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ನೋಯುತ್ತಿರುವ ಗಂಟಲು ಹಾಗೂ ಶೀತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.