ಬೆಳಗಾವಿ (ಸುವರ್ಣ ವಿಧಾನಸೌಧ): ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾಸಭಾ ಅಧಿವೇಶನದಲ್ಲಿ ಇಂದು ಹಲವು ಸ್ವಾರಸ್ಯಕರ ಚರ್ಚೆಗಳು ನಡೆದವು, ಕೊಬ್ಬರಿ ಬೆಲೆಗೆ ಬೆಂಬಲ ಬೆಲೆ ಕುರಿತು ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಹಾಗು ಹೆಚ್ ಡಿ ರೇವಣ್ಣ ನಡುವೆ ಮಾತಿನ ಚಕಮಕಿ ನಡೆಯಿತು.
ಅಧಿವೇಶನದಲ್ಲಿ ಶಾಸಕ ಶಿವಲಿಂಗೇಗೌಡ ಚರ್ಚೆ ಮಾಡುವ ವೇಳೆ ರೇವಣ್ಣ ತಮಗೆ ಮಾತಾಡಲು ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರು. ರೇವಣ್ಣ ನಡೆಗೆ ಆಕ್ರೋಶಗೊಂಡು ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮೈಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲೂ ಭಾರೀ ಮಳೆ ಸಾಧ್ಯತೆ!
ಸದನದಲ್ಲಿ ಮಾತನಾಡಿದ ಅವರು, ಹೇಯ್ ರೇವಣ್ಣ ನಿನ್ನಿಂದ ನನ್ನನ್ನು ಏನು ಮಾಡೋಕೆ ಆಗಲ್ಲ. ಏನು ನೀವು ಧರಣಿಗೆ ಹೋಗ್ತೀರಾ. ರೇವಣ್ಣರನರವೇ ನಿಮ್ಮದು ಮಾನಗೆಟ್ಟ ಬುದ್ದಿ , ನೀಚಗೆಟ್ಟ ಬುದ್ದಿ, ನಿಮಗೆ ಮಾನ ಮರ್ಯಾದೆ ಇಲ್ವೇನ್ರಿ. ಇಂತಹ ಗತಿಗೆಟ್ಟ ಮಾನಗೆಟ್ಟ ಕೆಲಸ ಮಾಡಬೇಡಿ. ಒಂದು ವಿಷಯ ಎತ್ತಿದ್ರೆ ಇಲ್ಲಿ ಬಂದು ಗಲಾಟೆ ಮಾಡಿಸ್ತೀರಲ್ಲ. ನಿಮಗೆ ಮಾನ ಮರ್ಯಾದೆ ಇದೆಯೇನ್ರೀ..? ಎಂದು ರೇವಣ್ಣ ವಿರುದ್ಧ ಏಕವಚನದಲ್ಲೇ ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.