ಧಾರವಾಡ : ಡಿ.ಕೆ. ಶಿವಕುಮಾರ್ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಹಿಂಪಡೆದ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇದೆ. ಈ ತರ ತೆಗೆದುಕೊಳ್ಳಬೇಕು ಅಂತ ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಂಡ ಮೇಲೆ ವಾದ ವಿವಾದ ಇರುತ್ತವೆ. ಅದಕ್ಕೆ ನಾನೇನು ಜಾಸ್ತಿ ಮಾತನಾಡೋಕೆ ಹೋಗಲ್ಲ. ನನ್ನ ನಿಲುವು ಸರ್ಕಾರದ ಪರ ಇರುತ್ತೆ. ಬಹಳಷ್ಟು ಸಿಬಿಐ ಹಾಗೂ ಇಡಿ ಪ್ರಕರಣಗಳ ಸಕ್ಸಸ್ ರೇಟ್ ಸಹ ಕಡಿಮೆ ಇದೆ. ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಅದು ಫೈನಲ್. ನನ್ನ ಪ್ರಕಾರ ಅದೇ ಫೈನಲ್ ಅಂತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲರೂ ಸೇರಿ ತೆಗೆದುಕೊಂಡ ನಿರ್ಧಾರ
ಅವರು ಲೀಗಲ್ ಆಗಿ ಹೋಗೋಕೆ ಚಾನ್ಸ್ ಇದೆ, ಹೋಗೆ ಹೋಗ್ತಾರೆ ಅವರು. ಸಂಪುಟ ಸಭೆಯಲ್ಲಿ ಒತ್ತಡ ಹಕುವಂತದ್ದು ಇಲ್ಲ. ಎಲ್ಲರೂ ಸೇರಿ ತೆಗೆದುಕೊಂಡ ನಿರ್ಧಾರ ಅದು. ಸ್ಪೀಕರ್ ಅನುಮತಿ ಇಲ್ಲ ಎನ್ನುವ ಆರೋಪದ ಬಗ್ಗೆ ಮಾತನಾಡಿ, ಒಂದು ಬಾರಿ ಕ್ಯಾಬಿನೆಟ್ ನಿರ್ಧಾರ ಮಾಡಿದ್ರೆ ಸ್ಪೀಕರ್ ಅನುಮತಿ ಪಡೆಯಲಾಗುತ್ತದೆ. ಲೀಗಲ್ ಆಗಿಯೇ ನಿರ್ಧಾರ ತೆಗೆದುಕೊಂಡಿದೆ ಎಂದು ಸರ್ಕಾರದ ನಿರ್ಧಾರವನ್ನು ಸಂತೋಷ್ ಲಾಡ್ ಸಮರ್ಥಿಸಿಕೊಂಡಿದ್ದಾರೆ.