ಮೈಸೂರು : ದೀಪಾಲಂಕಾರಕ್ಕೆ ಹಾಕಿದ್ದ ಕಮಾನು ಮುರಿದು ವಿಶ್ವಪ್ರಸಿದ್ದ ಮೈಸೂರು ದಸರಾಗೆ ಆರಂಭದಲ್ಲೆ ವಿಘ್ನ ಎದುರಾಗಿರುವ ಘಟನೆ ನಡೆದಿದೆ.
ಮೈಸೂರು ದಸರಾ ಉತ್ಸವಕ್ಕೆ ಸಿದ್ದತೆ ನಡೆಸುತ್ತಿರುವಾಗಲೇ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಹಾಕಿದ್ದ ಕಮಾನು ಇದ್ದಕ್ಕಿದ್ದಂತೆ ಮುರಿದು ಬಸ್ಗಳ ಮೇಲೆ ಬಿದ್ದ ಪರಿಣಾಮ ಕೆಎಸ್ಆರ್ಟಿಸಿ ಹಾಗು ಖಾಸಗಿ ಬಸ್ಗಳು ಜಖಂಗೊಂಡಿದ್ದು ಬಸ್ ನ ಗಾಜು ಪುಡಿಪುಡಿಯಾಗಿದೆ.
ಇದನ್ನೂ ಓದಿ: ಕಾರಿನ ಗಾಜು ಒಡೆದು ಚಿನ್ನಾಭರಣ ದರೋಡೆ!
ನಗರದ ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಬಳಿ ಘಟನೆ ನಡೆದಿದ್ದು ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಪ್ರಯಾಣಿಕರು ಹಾಗು ಸಾರ್ವಜನಿಕರು ಪರದಾಡುವಂತಾಯಿತು.
ದಸರಾ ಉತ್ಸವಕ್ಕೆ ದಿನಗಳು ಹತ್ತಿರವಾಗುತ್ತಿದ್ದಂತೆ ಅಲಂಕಾರ ಕಾಮಾಗಾರಿ ಚುರುಕುಗೊಂಡಿದೆ. ಈ ನಡುವೆ ಕಮಾನು ನಿರ್ಮಾಣ ಮಾಡುವವರು ತೋರಿರುವ ಬೇಜವಾಬ್ದಾರಿಗೆ ಕಮಾನು ಮುರಿದು ಬಿದ್ದು ಸಮಸ್ಯೆ ಉಂಟಾಗಿದೆ ಎಂದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.