ಉತ್ತರ ಕನ್ನಡ: ವಿಧ್ಯಾರ್ಥಿನಿಯರು ಸಾಮೂಹಿಕವಾಗಿ ಕೈ ಕೊಯ್ದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಜನತಾ ಶಾಲೆಯಲ್ಲಿ ನಡೆದಿದೆ.
9ನೇ ತರಗತಿಯ ಒಟ್ಟು 14 ವಿದ್ಯಾರ್ಥಿನಿಯರು ಕೈ ಕೊಯ್ದುಕೊಂಡಿದ್ದಾರೆ. ವಿದ್ಯಾರ್ಥಿಗಳು ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಕೈ ಕೊಯ್ದುಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೈ ಮೇಲೆ ಸೇಫ್ಟಿ ಪಿನ್ನಿಂದ ವಿದ್ಯಾರ್ಥಿಗಳು ಗೀರಿಕೊಂಡಿದ್ದಾರೆ. ಇನ್ನು ವಿಧ್ಯಾರ್ಥಿಗಳನ್ನ ಕೇಳಿದರೆ ಬೇರೆನೆ ಉತ್ತರ ನೀಡಿದ್ದಾರೆ. ವಿದ್ಯಾರ್ಥಿನಿಯರ ನಡವಳಿಕೆ ಬಗ್ಗೆ ಪಾಲಕರಲ್ಲಿ ಆತಂಕಕ್ಕೆ ಮನೆ ಮಾಡಿದೆ.
ಇದನ್ನೂ ಓದಿ: ತಮಿಳು ನಟ ವಿಜಯ್ ಆಂಟನಿ ಮಗಳು ಆತ್ಮಹತ್ಯೆ!
ಸದ್ಯ ಈ ಬಗ್ಗೆ ಪೋಲಿಸ್ ಇಲಾಖೆಯಿಂದ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ಒಬ್ಬೊಬ್ಬ ವಿದ್ಯಾರ್ಥಿಯಿಂದ ಒಂದೊಂದು ಉತ್ತರ ನೀಡುತ್ತಿದ್ದಾರೆ. ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕೂಡಲೆ ಶಾಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರು ಪಾಲಕರ ಸಭೆ ನಡೆಸಿದ್ದಾರೆ. ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ನಡೆದಿದೆ.