ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಗಣೇಶ ಚತುರ್ಥಿಯ ಹಿನ್ನೆಲೆ ಹೂ-ಹಣ್ಣುಗಳ ವ್ಯಾಪಾರ ತುಂಬಾ ಜೋರಾಗಿ ನಡೆಯುತ್ತಿದೆ.
ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೂ- ಹಣ್ಣುಗಳ ಖರೀದಿಯಲ್ಲಿ ಬ್ಯೂಸಿಯಾಗಿರುವ ಬೆಂಗಳೂರಿನ ಜನರು. ನಾಳೆ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆ ಮಾಡುಕಟ್ಟೆಗಳಲ್ಲಿ ಜನಸಾಮಾನ್ಯರಿಗೆ ಕೈಗೆಟಕುವಂತ ಬಗೆಬಗೆಯ ಹೂವುಗಳು ಹಾಗೂ ಹಣ್ಣುಗಳು.
ಇದನ್ನು ಓದಿ : ಅಕೌಂಟ್ ಹ್ಯಾಕ್ ಮಾಡಿ 40 ಲಕ್ಷ ರೂ. ವಂಚಸಿ ಆರೋಪಿ ಎಸ್ಕೇಪ್ !
ಸಿಲಿಕಾನ್ ಸಿಟಿಯ ಯಶವಂತಪುರದಲ್ಲಿ ಹೂವಿನ ಮಾರ್ಕೆಟ್ನಲ್ಲಿ ಹೂ -ಹಣ್ಣುಗಳ ಖರೀದಿ ಭರಾಟೆ ಜೋರಿನಲ್ಲಿ ನಡೆಯುತ್ತಿದ್ದು, ಹೂವಿನ ಬೆಲೆಯನ್ನು ನೋಡುವುದಾದರೆ ಈ ಕೆಳಗಿನಂತಿದೆ ನೋಡಿ.
- ಮಲ್ಲಿಗೆ ಹೂವು – 60 ರೂ.(ಮೊಳ)
- ಕನಕಾಂಬರ – 60 ರೂ. (ಮೊಳ)
- ಸೇವಂತಿಗೆ – 80 ರೂ. (ಮಾರು)
- ತುಳಸಿ ಮಾಲೆ – 80 ರೂ. (ಮಾರು)
- ಹೂವಿನ ಹಾರ – 120 (1ಕ್ಕೆ)
- ಚೆಂಡು ಹೂ – 50 ರೂ. (ಮಾರು)
- ಮಾವಿನ ಎಲೆ – 30 ರೂ. (1 ಕಟ್ಟು)
ಈ ರೀತಿಯ ಬೆಲೆಯಲ್ಲಿ ಹೂವುಗಳು ಮಾರಾಟವಾಗುತ್ತಿದೆ. ವರಮಹಾಲಕ್ಷ್ಮೀ ಹಬ್ಬಕ್ಕೆ ಹೋಲಿಸಿದರೆ ಹೂ ಹಣ್ಣು ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿರುವುದು ಜನರಲ್ಲಿ ಕೊಂಚ ಸಂತೋಷ ಮೂಡಿದೆ.