Thursday, November 14, 2024

ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಆರೋಪ: ಪಿಎಸ್​ಐ ಯಾಸ್ಮಿನ್​ ತಾಜ್​ ವರ್ಗಾವಣೆ!

ಮೈಸೂರು : ಪಿಎಸ್​ಐ ಪುತ್ರನ ವೀಲ್ಹಿಂಗ್​ ಹುಚ್ಚಾಟದಿಂದ ಕಳೆದ ರಾತ್ರಿ ವಯೋವೃದ್ದನಿಗೆ ಗುದ್ದಿದ್ದು ಆತನ ಸಾವಿಗೆ ಕಾರಣವಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಪಿಎಸ್​ಐ ಯಾಸ್ಮಿನ್​ ತಾಜ್​ ರನ್ನು ವರ್ಗಾವಣೆ​ ಮಾಡಿ ಮೈಸೂರು ಎಸ್​ಪಿ ಸೀಮಾ ಲಾಟ್ಕರ್​ ಆದೇಶ ಹೊರಡಿಸಿದ್ದಾರೆ.

ಗುರುಸ್ವಾಮಿ (68) ವರ್ಷ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ವೃದ್ದ, ಸೈಯದ್​ ಐಮಾನ್​ ವೀಲ್ಹಿಂಗ್​ ಪುಂಡಾಟ ಮಾಡಿದ ಆರೋಪಿ. ಶನಿವಾರ ರಾತ್ರಿ ವೀಲ್ಹಿಂಗ್ ಮಾಡುವ ವೇಳೆ ವೃದ್ದ ಗುರುಸ್ವಾಮಿಗೆ ಗುದ್ದಿದ್ದಾನೆ, ತೀವ್ರವಾಗಿ ಗಾಯಗೊಂಡಿದ್ದ ವೃದ್ದ ಸಾವಿಗೀಡಾಗಿದ್ದು ಕೆ.ಆರ್​ ಆಸ್ಪತ್ರೆ ಶವಾಗಾರದ ಬಳಿ ಮೃತನ ಶವದ ಎದುರು ಸಂಬಂಧಿಕರು ಪಿಎಸ್​ಐ ಯಾಸ್ಮಿನ್​ ತಾಜ್​ ರನ್ನು ಅಮಾನತ್ತು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ್ದಿದ್ದರು.

ಮಗನ ಶೋಕಿಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ನಂಜನಗೂಡು ಸಂಚಾರ ವಿಭಾಗದದಿಂದ ಬಿಡುಗಡೆಗೊಳಿಸಿ ಪಿಎಸ್ಐ ಯಾಸ್ಮಿನ್​ ತಾಜ್​ರನ್ನು ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇಂದು ಮಧ್ಯಾಹ್ನ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಆದೇಶಕ್ಕೆ ಕಿಡಿಕಾರಿದ ಯಾಸ್ಮಿನ್​:

ತಮ್ಮನ್ನು ನಂಜನಗೂಡು ಸಂಚಾರಿ ವಿಭಾಗದಿಂದ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ಹೊರಡಿಸಿರುವ ಆದೇಶ ಪ್ರತಿಯನ್ನು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಪೊಲೀಸ್​ ಇಲಾಖೆಯ ವಿರುದ್ದ ಅಸಮಧಾನವನ್ನು ಹೊರಹಾಕಿದ್ದಾರೆ. ಈ ಪೋಸ್ಟ್​​ನಲ್ಲಿ ಪ್ರೀತಿಯ ಇಲಾಖೆಯಿಂದ ನನ್ನ ವರ್ಗಾವಣೆ ಆದೇಶ ಪ್ರತಿಯನ್ನು ಪಡೆದುಕೊಂಡಿದ್ದೇನೆ ಎಂದು ವಾಟ್ಸಾಪ್​ ಸ್ಟೇಟಸ್​ ನಲ್ಲಿ ಪೋಸ್ಟ್​ ಮಾಡುವ ಮೂಲಕ ಇಲಾಖೆ ವಿರುದ್ದ ಬಹಿರಂಗವಾಗಿ ಅಸಮಧಾನ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES