ಬೆಂಗಳೂರು : ನನ್ನ ಮಗಳ ತಂಟೆಗೆ ಬರಬೇಡ ಎಂದ ತಂದೆಯನ್ನು ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಂಜಪ್ಪ ಸರ್ಕಲ್ ಬಳಿ ನಡೆದಿದೆ.
ಅನ್ವರ್ ಮೃತ ವ್ಯಕ್ತಿ, ಜಾಹೀದ್ ಕೊಲೆ ಮಾಡಿದ ಆರೋಪಿ, ಜಾಹಿದ್, ಅನ್ವರ್ ನ ಅಪ್ರಾಪ್ತ ಮಗಳ ಹಿಂದೆ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ, ಈ ವಿಚಾರಕ್ಕೆ ಸಂಬಂಧಿಸಿ ಕಳೆದ ಮೂರು ತಿಂಗಳ ಹಿಂದೆಯೇ ಅನ್ವರ್ ತನ್ನ ಮಗಳ ಹಿಂದೆ ಬರಬೇಡ ಎಂದು ಜಾಹೀದ್ ಗೆ ಎಚ್ಚರಿಕೆಯನ್ನು ನೀಡಿದ್ದ.
ಇದನ್ನೂ ಓದಿ: ಮತ್ತೆ ಬಂತು ಬಿಗ್ಬಾಸ್ ಸೀಸನ್: ಈ ಬಾರಿ ‘ಸಮ್ಥಿಂಗ್ ಸ್ಪೆಷಲ್’
ಎಚ್ಚರಿಕೆ ನೀಡಿದ್ದರೂ ಜಾಹೀದ್ ಸಹ ಅಪ್ರಾಪ್ತೆಯ ಹಿಂದೆ ಬಿದ್ದ ಆರೋಪಿ ಜಾಹೀದ್, ಶನಿವಾರ ರಾತ್ರಿ ಇದೇ ವಿಚಾರವಾಗಿ ಅನ್ವರ್ ಮತ್ತು ಜಾಹೀದ್ ನಡುವೆ ಗಲಾಟೆ ನಡೆದಿದೆ. ಈ ಗಲಾಟೆಯು ವಿಕೋಪಕ್ಕೆ ತಿರುಗಿ ಆರೋಪಿ ಜಾಹೀದ್ ಅನ್ವರ್ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಸದ್ಯ ಈ ಘಟನೆಯೂ ಬೆಂಗಳೂರಿನ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.