Thursday, December 19, 2024

ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ ಚಾಲನೆ!

ರಾಯಚೂರು : ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವಕ್ಕೆ ಮಂತ್ರಾಲಯದಲ್ಲಿ ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಧ್ವಜಾರೋಹಣ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

ಇದನ್ನೂ ಓದಿ: ವಿದ್ಯುತ್​ ಶಾಕ್​ ತಗುಲಿ ಲೈನ್​ಮೆನ್​ ದೇಹದಿಂದ ಬೇರ್ಪಟ್ಟ ತಲೆ!

ಆಗಸ್ಟ್ 29 ರಿಂದ ಸೆ. 4 ರ ವರೆಗೆ ಏಳು ದಿನಗಳ ಕಾಲ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ಗೋ, ಗಜ, ಅಶ್ವ, ಧಾನ್ಯ ಪೂಜೆಗಳೊಂದಿಗೆ ಮಂತ್ರಾಲಯದಲ್ಲಿ ಸಪ್ತರಾತ್ರೋತ್ಸವವಾಗಿ ರಾಯರ ಆರಾಧನೆ ನಡೆಯಲಿದೆ.

ಆಗಸ್ಟ್ 31 ರಂದು ಪೂರ್ವಾರಾಧನೆ, ಸೆ.1 ರಂದು ಮಧ್ಯಾರಾಧನೆ, ಸೆ.2 ರಂದು ಉತ್ತರರಾಧನೆ ನಡೆಯಲಿದೆ, ಉತ್ತರರಾಧನೆ ದಿನ ಮಠದ ರಥ ಬೀದಿಯಲ್ಲಿ ಮಹಾರಥೋತ್ಸವ ಜರುಗಲಿದೆ.

RELATED ARTICLES

Related Articles

TRENDING ARTICLES