ಮಂಡ್ಯ : KRS ಡ್ಯಾಂ ನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ನದಿಗಿಳಿದು ಪ್ರತಿಭಟನೆ ಮಾಡುತ್ತಿರುವ ರೈತರು ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ನದಿಯಲ್ಲಿ ನಡೆದಿದೆ.
ಕಳೆದ ರಾತ್ರಿಯಿಂದಲೆ ಸುಪ್ರಿಂಕೋರ್ಟ್ ಸೂಚನೆಯ ಬಳಿಕ KRS ಡ್ಯಾಂನಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಭುಗಿಲೆದ್ದ ರೈತರ ಆಕ್ರೋಶ.
ಇದನ್ನು ಓದಿ : ಬಿಪಿಎಲ್ ಕಾರ್ಡ್ ಹೊಂದಿರುವವರಲ್ಲಿ ಸರ್ಕಾರಿ ನೌಕರರೇ ಹೆಚ್ಚು!: ಕ್ರಮಕ್ಕೆ ಸಿದ್ದತೆ
ಈಗಾಗಲೇ ತಮಿಳುನಾಡಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದು, ತಕ್ಷಣವೇ ನೀರು ನಿಲ್ಲಿಸಿ ಎಂದು ಸ್ನಾನಘಟ್ಟದ ಬಳಿ ನದಿಗಳಿದು ರಾಜ್ಯ ಸರ್ಕಾರ ಮತ್ತು ಕಾವೇರಿ ನೀರು ಪ್ರಾಧಿಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿರುವ ರೈತರು.
ಬಳಿಕ ತಕ್ಷಣವೆ ನೀರು ನಿಲ್ಲಿಸಿ, ನಮ್ಮ ನಾಲೆಗಳಿಗೂ ನೀರು ಬಿಟ್ಟು ರೈತರ ಬೆಳೆಗೆ ಅವಕಾಶ ಮಾಡಿಕೊಡಿ ಎಂದು ರೈತ ಸಂಘದ ಮುಖಂಡ ಕೃಷ್ಣೇಗೌಡ ಅವರ ನೇತೃತ್ವದಲ್ಲಿ ಮನವಿ ಮಾಡಿಕೊಂಡ ರೈತರು. ಅಷ್ಟೇ ಅಲ್ಲದೆ ಕಾವೇರಿ ನೀರನ್ನು ನಿಲ್ಲಸದೆ ಇದ್ದರೆ ರಾಜ್ಯಾದ್ಯಂತ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.