ಚಿಕ್ಕಬಳ್ಳಾಪುರ : ಪವರ್ ಟಿವಿಯ ಆಪರೇಷನ್ ಲಂಚ ಲಕ್ಷ್ಮಿ ವರದಿ ಬೆನ್ನಲ್ಲೇ ಎಚ್ಚೆತ್ತ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತನಿಖೆಗೆ ಆದೇಶಿಸಿದ್ದಾರೆ.
ಜಮೀನು ಖಾತೆ ಮಾಡಿಸುವ ಸಲುವಾಗಿ ಸ್ಥಳೀಯರಿಂದ ಉಪ ತಹಶೀಲ್ದಾರ್ ಶೋಭಾ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸುದ್ದಿಯನ್ನು ಪವರ್ ಟಿವಿ ಸ್ಟಿಂಗ್ ಆಪರೇಷನ್ ಕಾರ್ಯಕ್ರಮದ ಮೂಲಕ ವಿಸ್ತೃತ ವರದಿಯನ್ನು ಇಂದು ಬೆಳಗ್ಗೆ ಪ್ರಸಾರ ಮಾಡಿಲಾಗಿತ್ತು.
ಇದನ್ನೂ ಓದಿ: ಕೆಂಪಣ್ಣ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ ಮಾಜಿ ಸಚಿವ ಗೋಪಾಲಯ್ಯ
ಪವರ್ ಟಿವಿ ವರದಿ ಆಧರಿಸಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತನಿಖೆಗೆ ಆದೇಶಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಉಪವಿಭಾಗಾಧಿಕಾರಿ ಅಶ್ವಿನ್ ನೇತೃತ್ವದಲ್ಲಿ ತನಿಖೆಗೆ ನಡೆಸಿ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
ಏನಿದು ಘಟನೆ ? :
ದರ್ಕಾಸ್ತಿನಲ್ಲಿ ಮಂಜೂರಾದ ವರ್ಲಕೊಂಡದ ಸರ್ವೆ ನಂಬರ್ 68ರ 2 ಎಕರೆ 26 ಗುಂಟೆ ಜಮೀನಿನ ಖಾತೆ ಮಾಡಿಕೊಡಲು ಕಳೆದ ಏಳು ತಿಂಗಳ ಹಿಂದೆ ಗುಡಿಬಂಡೆ ತಾಲ್ಲೂಕು ಕಚೇರಿಯಲ್ಲಿ ಅರ್ಜಿ ಹಾಕಲಾಗಿತ್ತು, ಆದರೇ ಅರ್ಜಿಗೆ ಸ್ಪಂದಿಸದ ಅಧಿಕಾರಿಗಳು, ಖಾತೆ ಮಾಡಿಕೊಡಲು ಗುಡಿಬಂಡೆ ವಿಭಾಗದ ರಾಜಸ್ವ ನಿರೀಕ್ಷಕರಾದ ಗುರುಪ್ರಕಾಶ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹಣ ಹೊಂದಿಸಲು ಪರದಾಡಿದ ಕುಟುಂಬ ಪವರ್ ಟಿವಿ ಸಹಯ ಕೋರಿತ್ತು, ಲಂಚಾವತಾರದ ಕುರಿತು ಪವರ್ ಟಿವಿ ಸ್ಟಿಂಗ್ ಆಪರೇಷನ್ ತಂಡ ಅಧ್ಯಯನ ನಡೆಸಿ, ಲಂಚಾವತಾರ ಬಯಲು ಮಾಡಲು ಲಂಚ ಲಕ್ಷ್ಮಿ ಶೀರ್ಷಿಕೆಯಡಿ ಶುಕ್ರವಾರ ವರದಿ ಪ್ರಸಾರ ಮಾಡಿತ್ತು.
ಪವರ್ ಟಿವಿ ವರದಿ ಬಂದ ಬೆನ್ನಲ್ಲೆ ಸುದ್ದಿ ಆಧರಿಸಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಉಪವಿಭಾಗಾಧಿಕಾರಿ ಅಶ್ವಿನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.