ಶಿವಮೊಗ್ಗ:
ಕೆಲದಿನಗಳಿಂದ ಹೆಚ್ಚಾಗಿ ಮಳೆಯಾಗುತ್ತಿದ್ದು ಕೆರೆ – ಕಟ್ಟೆ ಮತ್ತು ನದಿಗಳ ಮಟ್ಟ ಹೆಚ್ಚುತ್ತಿದೆ.
ಹಾಗೇ ಮಲೆನಾಡಿನಲ್ಲಿ ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಹೆಚ್ಚಾಗಿ ಏರಿಕೆಯಾಗಿದೆ, ಮಳೆ ಇಲ್ಲದೆ ಶರಾವತಿ ನೀರು ಹಿನ್ನೀರಿ ಹೋಗಿತ್ತು, ಹಾಗೂ ಮಳೆಯ ಅರ್ಭಟ ಜೋರಾಗಿದ್ದು ಶರಾವತಿ ಹಿನ್ನೀರಿನ ಮಟ್ಟ ಹೆಚ್ಚಾಗಿದೆ. ಕಳಸವಳ್ಳಿ, ಅಂಬಾರಗೊಡ್ಡು, ಮತ್ತು ಹೊಳೆಬಾಗಿಲಿನಲ್ಲಿ ನೀರು ಏರಿಕೆಯಾಗಿದೆ
ಸಿಗಂದೂರು ಲಾಂಚ್ ನಲ್ಲಿ ನೀಡಲಾಗಿದ್ದ ವಾಹನ ನಿಷೇಧವನ್ನು ವಾಪಸ್ ತೆಗೆದುಕೊಳ್ಳಲಾಗಿದೆ. ಕೆಲ ದಿನಗಳು ಮಳೆ ಬರದ ಕಾರಣ ನೀರಿನ ಮಟ್ಟ ಕಡಿಮೆ ಆಗಿದ್ದಕ್ಕೆ ವಾಹನ ಸಾಗಾಟವನ್ನು ನಿಷೇಧ ಮಾಡಿದ್ದರು, ಆದರೆ ಈಗ ಧಾರಕಾರ ಮಳೆಯಿಂದ ನೀರಿನ ಮಟ್ಟ ಜಾಸ್ತಿಯಾಗಿದ್ದು ವಾಹನ ಸಾಗಟ ಮತ್ತೆ ಶುರುಮಾಡಲು ಅನುಮತಿ ನೀಡಲಾಗಿದೆ.
ಇದನ್ನು ಓದಿ: ಬಜೆಟ್ ನಲ್ಲಿ ‘ಡಿಕೆಶಿ ಖಾತೆಗೆ ಸಿಂಹಪಾಲು’ : ಯಾವ ಇಲಾಖೆಗೆ ಎಷ್ಟು ಅನುದಾನ?
ಮಳೆಯಿಲ್ಲದ ಕಾರಣ ಕಳೆಗುಂದಿದ್ದ ಲಾಂಚ್ನಲ್ಲಿ ಕಳೆದ 20 ದಿನಗಳಿಂದ ಕೇವಲ ಸಾರ್ವಜನಿಕರು ಮತ್ತು ದ್ವಿಚಕ್ರವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.ಆದರೆ ಇದೀಗ ಲಿಂಗನಮಕ್ಕಿ ಜಲಾಶಯಕ್ಕೆ ನೀರಿನ ಒಳಹರಿವು ಆರಂಭವಾದ ಕಾರಣ ಎಲ್ಲ ವಾಹನಗಳನ್ನು ಲಾಂಚ್ನಲ್ಲಿ ಸಾಗಿಸುವುದಾಗಿ ತಿಳಿಸಲಾಗಿದೆ.
ಲಾಂಜ್ ನ ಫ್ಲಾಟ್ ಫಾರಂನವರೆಗೂ ಏರಿಕೆಯಾದ ನೀರಿನ ಮಟ್ಟ.