ಬೆಂಗಳೂರು : ದೇಶ, ವಿದೇಶದಲ್ಲಿ ಇವರ ಭಾಷಣದಿಂದ ನಮಗೆ ಹೊಟ್ಟೆ ತುಂಬೋಕೆ ಸಾಧ್ಯನಾ? ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಗುಡುಗಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಗ್ಯಾರಂಟಿಗಳ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ನೈತಿಕತೆ ಇಲ್ಲ ಎಂದು ಛೇಡಿಸಿದರು.
ಪ್ರಧಾನಿ ಮೋದಿ ಕೂಡ 5 ಗ್ಯಾರಂಟಿಗಳಿಗೆ ಹಣ ಎಲ್ಲಿಂದ ತರುತ್ತೀರಾ? ಅಂತ ಪ್ರಶ್ನೆ ಮಾಡಿದ್ರು. ಇವರಿಗೆ ಇರೋದು ಹೊಟ್ಟೆ ಕಿಚ್ಚು. ನಾವು 7 ಕಿಲೋ ಅಕ್ಕಿಯನ್ನು ಕೊಟ್ಟೆವು. ಇವರು 4 ಕಿಲೋ ಅಕ್ಕಿಗೆ ತಂದ್ರು. 14.5 ಲಕ್ಷ ಟನ್ ಅಕ್ಕಿ ಎಥೆನಾಲ್ ಉತ್ಪಾದನೆಗೆ ಕೊಡ್ತಿದ್ದಾರೆ. ಕೇಂದ್ರಕ್ಕೆ ಎಲ್ಲಿಂದ ಅಕ್ಕಿ ಬರುತ್ತೆ? ಎಂದು ಕುಟುಕಿದರು.
ಇದನ್ನೂ ಓದಿ : ಮೊಮ್ಮಗಳ ಆಸೆಯಂತೆ ತಾತ ಜಯಚಂದ್ರಗೆ ಸಿಕ್ತು ಸಚಿವ ಸ್ಥಾನಮಾನ
ಅವ್ರ ಹೊಟ್ಟೆ ಕಿಚ್ಚನ್ನು ತೋರಿಸಿದ್ದಾರೆ
ದೇಶದ ರೈತರು ಅಕ್ಕಿಯನ್ನು ಕೊಡ್ತಿರೋದು. ಫುಡ್ ಕಾರ್ಪೋರೇಷನ್ ಆಹಾರ ಸಂಗ್ರಹಿಸ್ತಾರೆ. ಅನಿವಾರ್ಯವಾದಾಗ ಆಹಾರ ಧಾನ್ಯ ಕೊಡ್ತಾರೆ. ಫುಡ್ ಕಾರ್ಪೋರೇಷನ್ ಮೊದಲ ಬಾರಿಗೆ ಅಕ್ಕಿ ಕೊಡಲಿಲ್ಲ. ಕೊಡ್ತೇವೆ ಅಂದು ನಂತರ ಕೊಡಲ್ಲ ಅಂದ್ರು. ಬಡವರಿಗೆ ಅಕ್ಕಿ ಕೊಡೋಕೆ ಅವರಿಗೆ ಇಷ್ಟವಿಲ್ಲ. ಅವರ ಹೊಟ್ಟೆ ಕಿಚ್ಚನ್ನು ತೋರಿಸಿದ್ದಾರೆ ಎಂದು ಚಾಟಿ ಬೀಸಿದರು.
ಅವ್ರಿಂದ ನಿರೀಕ್ಷೆ ಮಾಡೋಕೆ ಆಗಲ್ಲ
ನನ್ನ ಅನುಭವದಲ್ಲಿ ಪ್ರಣಾಳಿಕೆಯಂತೆ ಯೋಜನೆ ಅನುಷ್ಠಾನ ಮಾಡಿರೋದು ಕಾಂಗ್ರೆಸ್ ಮಾತ್ರ. ಡಬಲ್ ಇಂಜಿನ್ ಸರ್ಕಾರ ಹೇಳಿದಂತೆ ಯಾವುದೇ ಮಾತು ಕೂಡ ಈಡೇರಿಸೋಕೆ ಆಗಿಲ್ಲ. ಯಾವುದೇ ಜಾತಿ, ಧರ್ಮ ಎಂದು ಬೇರ್ಪಡಿಸದೇ ಆಡಳಿತ ಕೊಡುವುದು ರಾಜ್ಯಪಾಲರ ಭಾಷಣದಲ್ಲಿದೆ. ಇದನ್ನು ಕಾಂಗ್ರೆಸ್ ಪಕ್ಷದಿಂದ ನಿರೀಕ್ಷೆ ಮಾಡಬಹುದೇ ವಿನಃ, ಯಾವುದೇ ಪಕ್ಷದಿಂದ ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ. ಇವರ ಸ್ವಜನಪಕ್ಷ ಪಾತದಿಂದ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.