Saturday, May 18, 2024

ಮೊಮ್ಮಗಳ ಆಸೆಯಂತೆ ತಾತ ಜಯಚಂದ್ರಗೆ ಸಿಕ್ತು ಸಚಿವ ಸ್ಥಾನಮಾನ

ತುಮಕೂರು : ತಾತ ಮಿನಿಸ್ಟ್ರು ಆಗಬೇಕೆಂಬುದು ಮೊಮ್ಮಗಳ ಆಸೆ. ಈಗಾಗಲೇ ಸಚಿವರಾಗಿ ಅನುಭವವಿದ್ದರೂ ಮಿಸ್ ಆಗಿತ್ತು ಮಂತ್ರಿಗಿರಿ. ಹೀಗಾಗಿ, ತಾತನ ಪರ ಮೊಮ್ಮಗಳ ಲಾಬಿ. ಮೊಮ್ಮಗಳ ಕರೆಯೋಲೆಗೆ ಮನಸೋತ ‘ಕೈ’ ಪಡೆ.

ಹೌದು, ತಾತನಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಟಿ.ಬಿ ಜಯಚಂದ್ರ ಮೊಮ್ಮಗಳು ಪತ್ರ ಬರೆದಿದ್ದಳು. ಅದರಂತೆಯೇ, ಮೊಮ್ಮಗಳ ಆಸೆಯಂತೆ ತಾತನಿಗೆ ಸಚಿವ ಸ್ಥಾನಮಾನ ಭಾಗ್ಯ ಲಭಿಸಿದೆ.

ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರನ್ನು ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಟಿ.ಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ, ಅವರನ್ನು ಈಗ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ : ಶಿರಾ ಜಿಲ್ಲೆ ಆಗಬೇಕೆಂಬ ‘ಜನರ ಕನಸು ಪೂರೈಸುತ್ತೇನೆ’ : ಟಿ.ಬಿ ಜಯಚಂದ್ರ

ಶಿರಾ ಅಭಿವೃದ್ಧಿಗೆ ಶಕ್ತಿ ಬಂದಿದೆ

ಜಯಚಂದ್ರ ಅವರಿಗೆ ಸಚಿವ ಸಂಪುಟ ಸ್ಥಾನಮಾನದೊಂದಿಗೆ ಸಂಪುಟ ದರ್ಜೆ ಸಚಿವರಿಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ನೀಡಿ ಆದೇಶ ಹೊರಡಿಸಲಾಗಿದೆ. ಆ ಮೂಲಕ ಟಿಬಿಜೆ ಮೊಮ್ಮಗಳ ಆಸೆಗೆ ಕಾಂಗ್ರೆಸ್ ಸರ್ಕಾರ ಮಣಿದಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಜಯಚಂದ್ರ ಅವರು, ಶಿರಾ ತಾಲ್ಲೂಕಿನ ಅಭಿವೃದ್ಧಿಗೆ ಶಕ್ತಿ ಬಂದಿದೆ ಎಂದು ಹೇಳಿದ್ದಾರೆ.

ಸಚೇತಕರಾಗಿ ಸಲೀಂ ಅಹಮದ್ ನೇಮಕ

ಇಂದಿನಿಂದ ವಿಧಾನಸಭೆಯ ಅಧಿವೇಶನ ಪ್ರಾರಂಭವಾಗಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್‌ಗೆ ಸರ್ಕಾರಿ ಮುಖ್ಯ ಸಚೇತಕರನ್ನು ನೇಮಕ ಮಾಡಲಾಗಿದೆ. ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರಾಗಿ ಶಾಸಕ ಅಶೋಕ್ ಪಟ್ಟಣ ಹಾಗೂ ವಿಧಾನಪರಿಷತ್‌ನ ಸರ್ಕಾರದ ಮುಖ್ಯ ಸಚೇತಕರನ್ನಾಗಿ ಸಲೀಂ ಅಹಮದ್ ಅವರನ್ನು ನೇಮಕ ಮಾಡಲಾಗಿದೆ.

RELATED ARTICLES

Related Articles

TRENDING ARTICLES