Friday, November 22, 2024

ಪದವಿ ವಿದ್ಯಾರ್ಥಿಗಳಿಗೆ ಮತ್ತೊಂದು ಗ್ಯಾರಂಟಿ ಘೋಷಣೆ

ಮಂಗಳೂರು : ಪದವೀಧರ ನಿರುದ್ಯೋಗಿಗಳಿಗೆ ಹಾಗೂ ಡಿಪ್ಲೊಮ ನಿರುದ್ಯೋಗಿಗಳಿಗೆ ‘ಯುವ ನಿಧಿ ಯೋಜನೆ’ಯನ್ನು ಜಾರಿಗಳಿಸಿರುವ ಕಾಂಗ್ರೆಸ್ ಸರ್ಕಾರ, ಇದೀಗ ಮತ್ತೊಂದು ಭರವಸೆ ನೀಡಿದೆ.  

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರು, ಪದವಿ ವಿದ್ಯಾರ್ಥಿಗಳಿಗೆ ರಾಜಕೀಯ ತರಬೇತಿ ನೀಡಲು ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ ಎಂದು ಹೇಳಿದರು.

ಪದವಿ ಕಲಿತ ಯುವಕರಿಗೆ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಲು ತರಬೇತಿ ಕೇಂದ್ರಗಳು ಇಲ್ಲ. ಹಾಗಾಗಿ, ರಾಜಕೀಯ ತರಬೇತಿ ಸಂಸ್ಥೆ ಪ್ರಾರಂಭಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ. ಸದ್ಯ ಪುಣೆಯಲ್ಲಿ ಇದೆ. ಅವರ ಜೊತೆ ಚರ್ಚಿಸಿ ಒಂದು ವರ್ಷದ ಕೋರ್ಸ್ ಆರಂಭಿಸಲಿದ್ದೇವೆ ಎಂದು ತಿಳಿಸಿದರು.

ತರಬೇತಿ ಕೇಂದ್ರ ಸ್ಥಾಪನೆ ಎಲ್ಲಿ?

ಎಲ್ಲರಿಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅರಿವು ಮೂಡಿಸುವ ಉದ್ದೇಶ ಇದಾಗಿದೆ. ಕೇವಲ ಶಾಸಕರು, ಸಂಸದರು ಅಷ್ಟೇ ಅಲ್ಲದೇ ಎಲ್ಲರಿಗೂ ತಿಳಿಸುವ ಉದ್ದೇಶವಿದೆ. ರಾಜ್ಯದ ಪ್ರಮುಖ ಕೇಂದ್ರದಲ್ಲೇ ಇದನ್ನು ಸ್ಥಾಪಿಸಲಾಗುವುದು. ಇದಕ್ಕೆ ಸಿಲೇಬಸ್ ಇರಲಿದೆ. ಫುಲ್ ಟೈಮ್ ಉಪನ್ಯಾಸಕರು ಇರ್ತಾರೆ ಎಂದು ಯು.ಟಿ ಖಾದರ್ ಹೇಳಿದರು.

ಇದನ್ನೂ ಓದಿ : ಪಾತಾಳದಲ್ಲಿದ್ದ ಕಾಂಗ್ರೆಸ್ಸನ್ನು ನಾನು ಮೇಲಕ್ಕೆತ್ತಿದ್ದೇನೆ : ಡಿಕೆಶಿ ಅಸಮಾಧಾನ

ಆರು ತಿಂಗಳು‌ ಇಂಟರ್ನ್ ಶಿಪ್

ರಾಜಕೀಯ ನಾಯಕರು, ಮುತ್ಸದ್ದಿಗಳು ಬಂದು ತರಬೇತಿ ಕೊಡುತ್ತಾರೆ. ಆರು ತಿಂಗಳು‌ ಕಲಿತು ಇಂಟರ್ನ್ ಶಿಪ್ ಮುಗಿಸಬಹುದು. ಆ ಬಳಿಕ ಒಳ್ಳೆಯ ನಾಯಕ ಆಗಬಹುದು. ಅದರ ಜೊತೆಗೆ ಶಾಸಕರ ಬಳಿಯೂ ಕೆಲಸ ಮಾಡಬಹುದು. ಸಭಾಪತಿ ಕೆಲಸ ಮಾತನಾಡೋದಲ್ಲ, ಸಭೆಯನ್ನು ಚೆನ್ನಾಗಿ ನಡೆಸುವುದು ಎಂದು ತಿಳಿಸಿದರು.

ಜುಲೈ 3ರಿಂದ ಅಧಿವೇಶನ ಆರಂಭವಾಗಲಿದ್ದು, ರಾಜ್ಯಪಾಲರು ಸಂದೇಶ ನೀಡಲಿದ್ದಾರೆ. ಜುಲೈ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಮುಂಗಡ ಪತ್ರ ಮಂಡಿಸ್ತಾರೆ. ಶಾಸಕರೆಲ್ಲರ ಭಾಗವಹಿಸುವಿಕೆ ಅಧಿವೇಶನದಲ್ಲಿ ಆಗಬೇಕು ಎಂದು ಯು.ಟಿ ಖಾದರ್ ಹೇಳಿದರು.

RELATED ARTICLES

Related Articles

TRENDING ARTICLES