Friday, November 22, 2024

ಸುಮ್ನೇ ಪ್ರತಿಭಟಿಸುವ ಬದಲು ಅಕ್ಕಿ ಕೊಡಸ್ರೀ ; ಬಿಜೆಪಿಗೆ ಸಿದ್ದರಾಮಯ್ಯ ಸವಾಲು

ಹಾಸನ: ಪ್ರತಿಭಟನೆ ಮಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಹೇಳಿದ್ದೆಲ್ಲವನ್ನೂ ಮಾಡಿದ್ದಾರಾ? ಬಿಜೆಪಿಯವರಿಗೆ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ ಎಂದರು.

10 ಕೆಜಿ ಅಕ್ಕಿ ನೀಡದಿದ್ದರೆ ಜುಲೈ ಒಂದರಿಂದ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿ (BJP) ನಾಯಕರಿಗೆ ಹಾಸನದಲ್ಲಿ ಸವಾಲು ಹಾಕಿದ ಸಿದ್ದರಾಮಯ್ಯ, ಬಿಜೆಪಿಯವರು ಪ್ರತಿಭಟನೆ ಮಾಡುವ ಬದಲು ಕೇಂದ್ರದಿಂದ ಹೆಚ್ಚುವರಿ ಅಕ್ಕಿ ಕೊಡಿಸಲಿ ಎಂದರು.

ಇದನ್ನೂ ಓದಿ: ಬಿಜೆಪಿಯವ್ರು ಕೆಸರಿನಲ್ಲಿ ಬಿದ್ದು ಮೌಲ್ಯ ಕಳೆದುಕೊಂಡ್ರು : ಬಾಂಬೆ ಬಾಯ್ಸ್ ವಿರುದ್ದ ಬಿ ನಾಗೇಂದ್ರ ಕಿಡಿ

ಬಿಜೆಪಿಯವ್ರು ಪ್ರತಿಭಟನೆ ಬದಲು ಕೇಂದ್ರಕ್ಕೆ ಹೇಳಿ ಅಕ್ಕಿ ಕೊಡಿಸಲಿ 

ನಾವು ಅಕ್ಕಿಯನ್ನು ಖರೀದಿ ಮಾಡುತ್ತೇವೆ. ಬಿದಿಗಿಳಿದು ಹೋರಾಟ ಮಾಡುವ ಬದಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅಕ್ಕಿ ಕೊಡಿಸಲಿ. ಬಡವರಿಗೆ ಅಕ್ಕಿ ಕೊಡಬೇಕನ್ನುವುದು ನಮ್ಮ ನಿಲುವಾಗಿದೆ ಎಂದರು. ಕೇಂದ್ರ ಸರ್ಕಾರದವರು ಈಗ ರಾಜಕೀಯ ಮಾಡುತ್ತಿದ್ದಾರಲ್ವಾ, ದ್ವೇಷದ ರಾಜಕಾರಣ ಮಾಡುತ್ತೀರಲ್ವಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿ ನಿಮ್ಮ ಬಳಿ ಕೇಳಿದರೆ ಅಕ್ಕಿ ಕೊಡಿಸಿ ಅಂತ ನೀವು ದಯಮಾಡಿ ಹೇಳಿ ಎಂದು ಮಾಧ್ಯಮದವರಿಗೆ ಸೂಚಿಸಿದರು.

ಕೇಂದ್ರ ಸರ್ಕಾರವನ್ನು ಕೇಳಿ 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೀರಾ ಎಂಬ ಮಾಜಿ ಸಚಿವ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅಶೋಕ್, ಯಡಿಯೂರಪ್ಪ, ಬಸವರಾಜ‌ ಬೊಮ್ಮಾಯಿ ಅವರನ್ನು ಕೇಳಿ ಘೋಷಣೆ ಮಾಡಬೇಕಿತ್ತಾ? ನಾವು ಘೋಷಣೆ ಮಾಡಿದ್ದೆವು. ಆರಂಭದಲ್ಲಿ ಎಫ್‌ಸಿಐ ಹೆಚ್ಚುವರಿ ಅಕ್ಕಿ ಕೊಡಲು ಒಪ್ಪಿತ್ತು. ನಂತರ ಕೊಡುವುದಿಲ್ಲ ಎಂದು ಪತ್ರ ಬರೆದಿದೆ. ಇದರ ಅರ್ಥ ಏನು? ರಾಜಕೀಯ ‌ಅಲ್ಲವೇ ಇದು ಎಂದು ಪ್ರಶ್ನಿಸಿದ್ದಾರೆ.

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಬಗ್ಗೆ ಮಾತನಾಡಿದ ಸಿಎಂ, ಆಗಸ್ಟ್​​ 16ರಂದು ಯೋಜನೆ ಜಾರಿಯಾಗಲಿದೆ. ಇದರಿಂದ 1.28 ಕೋಟಿ ಕುಟುಂಬಕ್ಕೆ ಅನುಕೂಲವಾಗಲಿದೆ ಎಂದರು.

 

 

 

 

RELATED ARTICLES

Related Articles

TRENDING ARTICLES