ದಾವಣಗೆರೆ : ನಾಯಕ ಸಮುದಾಯವರು ಈಗ ಉಪಮುಖ್ಯಮಂತ್ರಿ ಆಗಬೇಕು ಮುಂದೆ ಮುಖ್ಯಮಂತ್ರಿ ಆಗಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರದ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾಯಕ ಡಿಸಿಎಂ, ಸಿಎಂ ದಾಳ ಉರುಳಿಸಿದ್ದಾರೆ.
ನಾಯಕ ಸಮುದಾಯದಲ್ಲಿ ಸತೀಶ್ ಜಾರಕಿಹೊಳಿಗೆ ಸಿಎಂ ಆಗೋ ಅರ್ಹತೆ ಇದೆ. ಮುಂದಿನ ದಿನಗಳಲ್ಲಿ ನಮ್ಮ ಸಮುದಾಯ ವ್ಯಕ್ತಿ ಸಿಎಂ ಆಗಬೇಕು. ನಾನು ಮುಂದೆ ಯಾವುದೇ ಚುನಾವಣೆಯಲ್ಲಿ ನಿಲ್ಲೋದಿಲ್ಲ. ಆದರೆ, ನಮ್ಮ ಗುರಿ ಇರೋದು ಒಂದೇ. ನಮ್ಮ ಸಮುದಾಯದ ವ್ಯಕ್ತಿ ಮುಂದಿನ ಮುಖ್ಯಮಂತ್ರಿ ಆಗೋದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಾಳೆಯೇ ಹೋಗಿ ಸಿಎಂ ಆಗಬೇಕು ಅಂತ ನಾವು ಕೇಳಲ್ಲ : ಡಾ.ಜಿ ಪರಮೇಶ್ವರ್
ಡಿಸಿಎಂ ಸ್ಥಾನ ಕೇಳಲು ಹೊರಟಿದ್ವಿ
ನಮ್ಮ ಸತೀಶ್ ಜಾರಕಿಹೊಳಿಗೆ ಎಲ್ಲ ಅರ್ಹತೆ ಇದೆ. ಡಿಸಿಎಂ ಹಾಗೂ ಸಿಎಂ ಆದರೆ, ಆಗ ನಮ್ಮ ಸಮಾಜಕ್ಕೆ ಇನ್ನು ಉತ್ತಮವಾಗುತ್ತದೆ. ನಾವು ಈಗ ಡಿಸಿಎಂ ಸ್ಥಾನ ಕೇಳಲು ಹೊರಟಿದ್ವಿ. ಆದರೆ, ರಾಜಕೀಯ ಸಂಘರ್ಷಗಳಲ್ಲಿ ಅದು ಆಗಲಿಲ್ಲ. ಡಿಸಿಎಂ ಬಗ್ಗೆ ಒತ್ತಾಯವನ್ನು ಕೂಡ ಮುಂದೆ ಕೇಳುತ್ತೇವೆ ಎಂದು ಕೆ.ಎನ್ ರಾಜಣ್ಣ ತಿಳಿಸಿದ್ದಾರೆ.
ನಮ್ಮ ಮಧ್ಯೆ ಪೈಪೋಟಿ ಇರತ್ತೆ
ಚುನಾವಣೆ ವೇಳೆ ನಮ್ಮ ನಮ್ಮ ಮಧ್ಯೆ ಪೈಪೋಟಿ ಇರತ್ತೆ. ಚುನಾವಣೆ ಮುಗಿದ ಬಳಿಕ ದ್ವೇಷ ರಾಜಕಾರಣ ಮಾಡಬಾರದು. ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು. 15 ಎಸ್ಟಿ ಕ್ಷೇತ್ರದಲ್ಲಿ ನಮ್ಮ ನಮ್ಮ ಮಧ್ಯೆಯೇ ಹೋರಾಟ ಇರತ್ತೆ. ದೇವದಾಸಿ ಪದ್ಧತಿ ನಿರ್ಮೂಲನೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.