Saturday, November 2, 2024

ಅಕ್ಕಿಯಲ್ಲೂ ಕಮಿಷನ್ ಹೊಡೆಯೋ ಯತ್ನವಿರಬಹುದು ; ಬಿ.ವೈ ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government)  ಅಕ್ಕಿ ಖರೀದಿಯಲ್ಲೂ ಕಮಿಷನ್ ಹೊಡೆಯುವ ಯತ್ನ ನಡೆಸುತ್ತಿರಬಹುದು ಎಂದು ಶಾಸಕ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಹೌದು, ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಅಕ್ಕಿ ಖರೀದಿಯನ್ನೂ ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಮೂಲಕ ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಮೂಲಕ ಕಮಿಷನ್ ಹೊಡೆಯುವ ಪ್ರಯತ್ನವಿರಬಹುದು ಎಂದು ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ

ರಾಜ್ಯದ ಮುಖ್ಯಮಂತ್ರಿಗಳು ಅಕ್ಕಿ ವಿಚಾರದಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ (Union Government) 5 ಕೆಜಿ ಕೊಡ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನ ಬೇರೆ ಕಡೆ ಖರೀದಿ ಮಾಡಬಹುದು. ಛತ್ತೀಸ್‌ಗಢ, ಹರಿಯಾಣ, ತೆಲಂಗಾಣದಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಕಮೀಷನ್ ಹೊಡೆಯುವ ಪ್ರಯತ್ನವಿರಬಹುದು.

ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದ್ರೆ ರೈತರಿಗೂ ಅನುಕೂಲ

ನಮ್ಮ ರಾಜ್ಯದ ರೈತರಿಂದ ಅಕ್ಕಿ ಖರೀದಿ ಮಾಡಿದ್ರೆ ರೈತರಿಗೂ ಅನುಕೂಲವಾಗುವುದಿಲ್ಲವೇ? ಕಮಿಷನ್ ಹೊಡೆಯೋ ಉದ್ದೇಶವಿರೋಧಕ್ಕೆ ಬೇರೆ ರಾಜ್ಯದಿಂದ ಖರೀದಿ ಮಾಡೋಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗ್ಯಾರಂಟಿ ಜಾರಿ ಮಾಡೋದು ಅಸಾಧ್ಯ

ಚುನಾವಣಾ ಸಮಯದಲ್ಲಿ ಗ್ಯಾರಂಟಿ ಕಾರ್ಡ್ ಕೊಟ್ಟಿದ್ರು. ವಾಸ್ತವಿಕತೆ ಈಗ ಅವರಿಗೆ ಅರ್ಥ ಆಗ್ತಿದೆ. ಬಹುಶಃ ಗ್ಯಾರಂಟಿ ಕಾರ್ಡ್ ಕೊಡುವಾಗ ಕಾಂಗ್ರೆಸ್ ಬಹುಮತ ಪಡೆಯುತ್ತೇ ಅಂದುಕೊಂಡಿರಲಿಲ್ಲ.ಗ್ಯಾರಂಟಿ ಜಾರಿ ಮಾಡೋದು ಅಸಾಧ್ಯ ಅನ್ನೋದು ಸಿಎಂಗೆ ಮನವರಿಕೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.

 

RELATED ARTICLES

Related Articles

TRENDING ARTICLES