ಬೆಂಗಳೂರು : ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆಜಿಎಫ್ ಬಾಬು ಭರ್ಜರಿ ಚುನಾವಣಾ ಪ್ರಚಾರ ನಡೆಸಿದರು.
ಚಿಕ್ಕಪೇಟೆ ಮತಕ್ಷೇತ್ರದ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿಯಿಂದ ರೋಡ್ ಶೋ ಆರಂಭವಾಯಿತು. ಕೆ.ಆರ್.ಮಾರುಕಟ್ಟೆ, ಕಲಾಸಿ ಪಾಳ್ಯ, ವಿಲ್ಸನ್ ಗಾರ್ಡನ್ ಗಳಲ್ಲಿ ಕೆಜಿಎಫ್ ಬಾಬು ರೋಡ್ ಶೋ ಆರಂಭವಾಯಿತು. ನೂರಾರು ಬೆಂಬಲಿಗರು ಬೈಕ್ ನಲ್ಲಿ ಭಾಗವಹಿಸಿದರು.
ಪ್ರಚಾರದ ವೇಳೆ ಪವರ್ ಟಿವಿಯೊಂದಿಗೆ ಮಾತನಾಡಿದ ಕೆಜಿಎಫ್ ಬಾಬು, ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿದೆ. ಆದರೆ, ನಾನು ಕಾಂಗ್ರೆಸ್ ಗೆ ಮೋಸ ಮಾಡಿಲ್ಲ ಎಂದು ಹೇಳಿದರು.
‘ಕೈ‘ ಪಕ್ಷ ಟಿಕೆಟ್ ಕೊಡದಿದ್ದರೇನು?
ನನ್ನ ತಾತನ ಕಾಲದಿಂದಲೂ ನಾವು ಕಾಂಗ್ರೆಸ್ ಬೆಂಬಲಿಗರು. ಪಕ್ಷ ಟಿಕೆಟ್ ಕೊಡದಿದ್ದರೇನು? ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಂತು ಗೆದ್ದು ತೋರಿಸುತ್ತೇನೆ. 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ಕೆಜಿಎಫ್ ಬಾಬು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ‘ಚಿಕ್ಕಪೇಟೆ ಪ್ರಣಾಳಿಕೆ’ ಬಿಡುಗಡೆ ಮಾಡಿದ ಕೆಜಿಎಫ್ ಬಾಬು
ಹಿಂದೂ, ಜೈನ, ಬೌದ್ಧ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯಗಳ ದೇವಾಲಯ, ಮಸೀದಿಗಳಿಗೆ ಕೊಟ್ಯಂತರ ರೂಪಾಯಿ ಕೊಟ್ಟಿದ್ದೇನೆ. ನೀತಿ ಸಂಹಿತೆ ಜಾರಿಗೆ ಬರುವ ಮೊದಲೇ ಮನೆ ಮನೆಗೆ ಈಗಾಗಲೇ ತಲಾ ಹತ್ತು ಸಾವಿರ ರೂಪಾಯಿಗಳ ಡಿಡಿ ವಿತರಿಸಿದ್ದೇನೆ ಎಂದು ಹೇಳಿದರು.
ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ
ಈ ಬಾರಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ನನ್ನ ಚುನಾವಣಾ ಗುರುತು ‘ಗ್ಯಾಸ್ ಸಿಲಿಂಡರ್’. ಯಾವುದೇ ಸ್ವಹಿತಾಸಕ್ತಿಯನ್ನು ಹೊಂದದೆ ಸೇವಾ ಮನೋಭಾವದಿಂದ ನಿಮ್ಮ ಸೇವೆಗೆ ನನ್ನ ವೈಯಕ್ತಿಕ ದುಡುಮೆಯ ಆದಾಯವನ್ನು ಮೀಸಲಾಗಿಟ್ಟಿದ್ದೇನೆ ಎಂದರು.
ಚಿಕ್ಕಪೇಟೆ ಕ್ಷೇತ್ರವನ್ನು ಯಾರ ನೆರವನ್ನೂ ಪಡೆಯದೇ ಅಬಿವೃದ್ಧಿ ಮಾಡಬೇಕೆಂದು ನಿರ್ಧರಿಸಿದ್ದೇನೆ. ಕೊಟ್ಟ ಭರವಸೆಯನ್ನು ಯಾವುದೇ ತಡಮಾಡದೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಿದ್ದೇನೆ ಎಂದು ಭರವಸೆ ನೀಡಿದರು.