ವಿಜಯಪುರ : ಮಾಜಿ ಸಚಿವ ಎಂ.ಬಿ ಪಾಟೀಲ್ ಸಿಎಂ ಆಗುವ ಆಸೆ ವ್ಯಕ್ತಿಪಡಿಸಿರುವ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಎಂಬಿಪಿ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಎಂ.ಬಿ ಪಾಟೀಲ್ ಸಿಎಂ ಆಗಲಿ ಬಿಡಿ, ಒಳ್ಳೆಯದು. ಆದರೆ, ಎಂಬಿಪಿ ಅವರನ್ನು ಸಿಎಂ ಆಗಲು ಎಲ್ಲಿ ಬಿಡ್ತಾರೆ. ಡಿಕೆಶಿ, ಸಿದ್ರಾಮಯ್ಯ ಅವರು ಎಂಬಿಪಿ ಸಿಎಂ ಆಗಲು ಬಿಡ್ತಾರಾ? ಎಂದು ಪ್ರಶ್ನೆ ಮಾಡಿದ್ದಾರೆ.
ನಾನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಸವಾಲ್ ಹಾಕ್ತೀನಿ. ಲಿಂಗಾಯತ ಡ್ಯಾಂ ಅಲ್ಲ, ಅದರಿಂದ ಒಂದೇ ಒಂದು ಚಿಪ್ ಕಲ್ಲು ತೆಗೆಯಲು ಆಗಲ್ಲಾ. ಮೇ 10ರಂದು ಕಾಂಗ್ರೆಸ್ ನ ಉಳಿದಿರುವ ಒಂದೇ ಒಂದು ಕೊನೆಯ ಮೊಳೆ ಹೊಡಿತಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಡಾ.ಅಂಬೇಡ್ಕರ್ ಅವರಿಗೆ ಜಾಗ ಕೊಡಲಿಲ್ಲ. ಕಾಂಗ್ರೆಸ್ ನಾಯಕರುಗಳು ಅವರಿಗೆ ಯಾರೂ ಭಾರತ ರತ್ನ ಕೊಟ್ಟಿಲ್ಲ. ಅವರೇ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಯುವಕನಿಗೆ ಎಂ.ಬಿ ಪಾಟೀಲ್ ಕಪಾಳಮೋಕ್ಷ
ಲಿಂಗಾಯತ ಸಿಎಂಗಳು ಭ್ರಷ್ಟರೇ?
ನಿನ್ನೆ ಡಿಕೆಶಿ ಲಿಂಗಾಯತ ಡ್ಯಾಂ ಅನ್ನು ಒಡೆಯುತ್ತೇವೆ ಎಂದಿದ್ದಾರೆ. ಲಿಂಗಾಯತ ಡ್ಯಾಂ ಒಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ನಿಮ್ಮ ಹಣೆ ಬರಹಕ್ಕೆ ಮೇಕೆದಾಟು ಯೋಜನೆ ಮಾಡಿಕೊಳ್ಳಲಾಗಿಲ್ಲ. ಲಿಂಗಾಯತರೆಲ್ಲರೂ ಬ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರ ದ್ವೇಷ ಇದ್ದರೆ ವ್ಯಕ್ತಿಗತವಾಗಿ, ವಯಕ್ತಿಕವಾಗಿ ಒಬ್ಬರಿಗೆ ಮಾತಾಡಬೇಕು. ಅದು ಬಿಟ್ಟು ಎಲ್ಲಾ ಲಿಂಗಾಯತ ಸಿಎಂಗಳು ಭ್ರಷ್ಟರು ಎಂಬುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.
ಸಿದ್ರಾಮಯ್ಯ ಕ್ಷಮೆ ಕೇಳಬೇಕು
ಧರ್ಮ ಒಡೆಯಲು ನಿಂತವರಿಗೆ ಕಳೆದ ಬಾರಿ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಹೋದ ಚುನಾವಣೆಯಲ್ಲಿ ಲಿಂಗಾಯತರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ನಿನ್ನೆಯ ಹೇಳಿಕೆ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಲಿಂಗಾಯತರನ್ನು ಒಡೆಯುವುದು, ಹಿಂದೂ ಧರ್ಮಕ್ಕೆ ಅಪಮಾನ ಮಾಡುವುದಾಗಲಿ ಆಗಬಾರದು. ಈ ಕೂಡಲೇ ಸಿದ್ರಾಮಯ್ಯನವರು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.