Wednesday, October 30, 2024

IMDB ಟ್ರೆಂಡಿಂಗ್ ನಲ್ಲಿ ಕಬ್ಜ ನಂ.1 : ಗ್ಲೋಬಲ್ ಮಾರ್ಕೆಟ್ ಕಬ್ಜಾಗೆ ಉಪ್ಪಿ ರೆಡಿ

ಬೆಂಗಳೂರು : ಕಬ್ಜ ರಿಲೀಸ್​ಗೆ ಕೌಂಟ್​ಡೌನ್ ಶುರುವಾಗಿದೆ. ದೇಶಾದ್ಯಂತ ಕಬ್ಜ ಅಲೆ ಸಖತ್ ಜೋರಿದ್ದು, ಪ್ರತಿಷ್ಠಿತ IMDbಯಲ್ಲಿ ಟ್ರೆಂಡಿಂಗ್ ನಲ್ಲಿ ಕನ್ನಡಿಗರ ಈ ಮಹೋನ್ನತ ಚಿತ್ರ ನಂಬರ್ ಒನ್​​ನಲ್ಲಿದೆ.

ಕಬ್ಜ.. ಕಬ್ಜ.. ಕಬ್ಜ… ಈಗಾಗ್ಲೇ ಗ್ಲೋಬಲ್ ಮಾರ್ಕೆಟ್​​ನಲ್ಲಿ ನಮ್ಮ ಕನ್ನಡಿಗರು ಪರಭಾಷಿಗರ ದಿಲ್ ಕಬ್ಜ ಮಾಡಾಗಿದೆ. ಕೆಜಿಎಫ್, ಕಾಂತಾರ, 777 ಚಾರ್ಲಿ ಅಂತಹ ಸಿನಿಮಾಗಳಿಂದ ಕೋಟೆ ಕೊತ್ತಲುಗಳನ್ನ ವಿಸ್ತರಿಸಿ, ಹೀಗೂ ಸಿನಿಮಾ ಮಾಡಬಹುದು ಅನ್ನೋದನ್ನ ನಿರೂಪಿಸಿದ್ದಾರೆ. ಇದೀಗ ಕಬ್ಜದಿಂದ ವರ್ಲ್ಡ್​ ಬಾಕ್ಸ್ ಆಫೀಸ್ ಕಬ್ಜ ಮಾಡೋಕೆ ಫಿಲ್ಮ್ ಮೇಕರ್ ಆರ್ ಚಂದ್ರು ಸಜ್ಜಾಗಿದ್ದಾರೆ.

ಟ್ರೆಂಡ್​​ ಸೆಟ್ಟರ್ ಉಪೇಂದ್ರ, ಬಹುಭಾಷಾ ನಟಿ ಶ್ರಿಯಾ ಸರಣ್, ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್, ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಹೀಗೆ ಬಹುದೊಡ್ಡ ತಾರಾಗಣದ ಈ ಸಿನಿಮಾ ನಿಜಕ್ಕೂ ನೋಡುಗರನ್ನ ಹೊಸ ಪ್ರಪಂಚಕ್ಕೆ ಕೊಂಡೊಯ್ಯಲಿದೆ. ಅದು ಅರ್ಕೇಶ್ವರನ ಪ್ರಪಂಚ. ಗ್ಯಾಂಗ್​ಸ್ಟರ್ ಅರ್ಕೇಶ್ವರನಾಗಿ ಉಪ್ಪಿ ರಕ್ತದ ಹೊಳೆ ಹರಿಸಲಿದ್ದು, ಅದರ ಹಿಂದಿನ ಅಸಲಿ ರೋಚಕ ಕಥೆ ಹಾಗೂ ಭಾವನಾತ್ಮಕ ವ್ಯಥೆಗಳು ರಿವೀಲ್ ಆಗಲಿವೆ.

ಆಕ್ಷನ್ ಡ್ರಾಮಾ ಕಬ್ಜ

ಕಬ್ಜ 1945ರಿಂದ 1987ರ ಕಾಲಘಟ್ಟದ ಪೀರಿಯಾಡಿಕ್ ಆಕ್ಷನ್ ಡ್ರಾಮಾ. ಅದಕ್ಕಾಗಿ ಬೃಹತ್ ಸೆಟ್​​ಗಳನ್ನ ಹಾಕಿ ಸಿನಿಮಾ ತಯಾರಿಸಿರೋ ಪರಿ ಅವರ್ಣನೀಯ. ಸುಮಾರು 120 ಕೋಟಿ ಬೃಹತ್ ವೆಚ್ಚದಲ್ಲಿ ತಯಾರಾದ ಬಿಗ್ಗೆಸ್ಟ್ ರೆಟ್ರೋ ಌಕ್ಷನ್ ಎಂಟರ್​ಟೈನರ್ ಇದಾಗಲಿದ್ದು, ನೋಡುಗರಿಗೆ ಫ್ರೆಶ್ ಫೀಲ್ ಜೊತೆ ಥ್ರಿಲ್ ಕೊಡಲಿದೆ. ಪ್ರಮೋಷನ್ಸ್ ಕೂಡ ಬಹಳ ಅದ್ಧೂರಿಯಾಗಿ ನಡೆಯುತ್ತಿದ್ದು, ಚಿತ್ರತಂಡ ರೀಸೆಂಟ್ ಆಗಿ ಮುಂಬೈ ಇವೆಂಟ್ ಮುಗಿಸಿ ಬಂದಿದೆ.

ಇದನ್ನೂ ಓದಿ : ಕಬ್ಜದಲ್ಲಿ ರೆಟ್ರೋ ಕಾರ್ಗಳ ಕಲರವ : ಅಬ್ಬಬ್ಬಾ ಎಷ್ಟು ಕೋಟಿ ವೆಚ್ಚ ಮಾಡಿದ್ದಾರೆ ಗೊತ್ತಾ..?

ಇದೀಗ ಖ್ಯಾತ ನಿರೂಪಕ ಅಕುಲ್ ಬಾಲಾಜಿ ನಡೆಸಿರೋ ಕಬ್ಜ ಸಂದರ್ಶನ ಎಲ್ಲೆಡೆ ಸಖತ್ ವೈರಲ್ ಆಗ್ತಿದೆ. ಉಪೇಂದ್ರ ಹಾಗೂ ಶ್ರಿಯಾ ಸರಣ್ ಸಿನಿಮಾ ಹಾಗೂ ಅದ್ರ ಮೇಕಿಂಗ್ ಜರ್ನಿಯನ್ನ ಎಳೆ ಎಳೆಯಾಗಿ ಈ ವಿಶೇಷ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದು, ಅದೇ ವೇದಿಕೆಯಲ್ಲಿ ಸೊಂಟ ಬಳುಕಿಸಿರೋದು ನೋಡುಗರಿಗೆ ಸಖತ್ ಮಜಾ ಕೊಡ್ತಿದೆ. ಅಕುಲ್ ಜೊತೆ ಕಬ್ಜ ಕ್ವೀನ್ ಹಾಗೂ ಡಾನ್ ಉಪ್ಪಿ ಸ್ಟೆಪ್ಸ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು ಸುಳ್ಳಲ್ಲ.

IMDBಯಲ್ಲಿ ಟ್ರೆಂಡಿಂಗ್ ನಂಬರ್ ಒನ್​​

ಇನ್ನು ಈ ವರ್ಷದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕಬ್ಜ ಅಗ್ರಸ್ಥಾನದಲ್ಲಿದ್ದು, ಪ್ರತಿಷ್ಠಿತ IMDbಯಲ್ಲಿ ಟ್ರೆಂಡಿಂಗ್ ನಂಬರ್ ಒನ್​​ನಲ್ಲಿದೆ. ರಿಲೀಸ್​ಗೆ ಇನ್ನು ಕೇವಲ ಐದೇ ಐದು ದಿನ ಬಾಕಿ ಉಳಿದಿದ್ದು, ವಿಶ್ಯುವಲ್ ಟ್ರೀಟ್​​ನ ಕಣ್ತುಂಬಿಕೊಳ್ಳೋಕೆ ಇಡೀ ಇಂಡಿಯಾ ಕಾತರಗೊಂಡಿದೆ. ಉಪ್ಪಿ ಫ್ಯಾನ್ಸ್ ಜೊತೆ ಕಿಚ್ಚನ ಫ್ಯಾನ್ಸ್ ಹಾಗೂ ಶಿವಣ್ಣ ಫ್ಯಾನ್ಸ್ ಕೂಡ ಸಖತ್ ಸೆಲೆಬ್ರೇಷನ್ಸ್​ಗೆ ಪ್ಲ್ಯಾನ್ಸ್ ಮಾಡ್ತಿದ್ದಾರೆ.

ಒಟ್ಟಾರೆ, ಗ್ಲೋಬಲ್​ ಮಾರ್ಕೆಟ್​​ನಲ್ಲಿ ಕಬ್ಜ ಕರಾಮತ್ತು ಕೆಜಿಎಫ್ ಕ್ರೇಜ್​ನಂತೆ ಜೋರಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ಕೂಡ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಕಬ್ಜ 2ಗೆ ಮುನ್ನುಡಿ ಬರೆಯಲಿದೆ ಈ ಸಿನಿಮಾ. ಇದೇ ಮಾರ್ಚ್​ 17ಕ್ಕೆ ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ಬರ್ತಿರೋ ಕಬ್ಜ, ಅಪ್ಪು ಬರ್ತ್ ಡೇಗೆ ಟ್ರಿಬ್ಯೂಟ್ ನೀಡ್ತಿದೆ. ಜೊತೆಗೆ ಯುಗಾದಿ ಹಬ್ಬದ ಸಂಭ್ರಮವನ್ನು ಡಬಲ್ ಮಾಡ್ತಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES