Saturday, October 26, 2024

ರಾಷ್ಟ್ರ ರಾಜಕಾರಣದತ್ತ ಸಿಎಂ ಹೆಚ್​ಡಿಕೆ ಚಿತ್ತ..?

ಬೆಂಗಳೂರು : ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ರಾಷ್ಟ್ರ ರಾಜಕಾರಣದತ್ತ ಚಿತ್ತ ಹರಿಸಿದ್ದಾರಾ ಅನ್ನೋ ಕುತೂಹಲ ಮೂಡಿದೆ. ಕುಮಾರಸ್ವಾಮಿ ಜೊತೆ ದೂರವಾಣಿಯಲ್ಲಿ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್​ ಚರ್ಚೆ ನಡೆಸಿದ್ದಾರೆ. ಅನೇಕ ರಾಜಕೀಯ ವಿಚಾರಗಳ ಬಗ್ಗೆ ಹೆಚ್​ಡಿಕೆ ಮತ್ತು ಕೆಸಿಆರ್ ಸಮಾಲೋಚನೆ ನಡೆಸಿದ್ದಾರೆ.
ತೃತೀಯ ರಂಗದ ನಾಯಕರನ್ನು ಒಗ್ಗೂಡಿಸಲು ಕಸರತ್ತು ನಡೆದಿದ್ದು, ಇಂದು ಸಂಜೆ ಕೇರಳ ಸಿಎಂ ಜೊತೆಗೂ ಕೆಸಿಆರ್​​ ಸಮಾಲೋಚನೆ ನಡೆಸಲಿದ್ದಾರೆ. ಮೇ.14ರಂದು ಡಿಎಂಕೆ ನಾಯಕರ ಜೊತೆಗೂ ಕೆಸಿಆರ್​ ಚರ್ಚಿಸುತ್ತಾರೆ. ಡಿಎಂಕೆ ನಾಯಕ ಸ್ಟಾಲಿನ್ ಅವರೊಡನೆಯೂ ಸಮಾಲೋಚನೆ ನಡೆಸಲಿದ್ದಾರೆ.
ಹೀಗೆ ಲೋಕಸಭಾ ಫಲಿತಾಂಶದ ನಂತ್ರ ರಾಜಕೀಯ ಧ್ರುವೀಕರಣ ಸಾಧ್ಯತೆ ಇದ್ದು, ಸಿಎಂ ಕುಮಾರಸ್ವಾಮಿ ದೆಹಲಿ ರಾಜಕಾರಣದತ್ತ ಹೋಗ್ತಾರಾ ಅನ್ನೋ ಕುತೂಹಲಕ್ಕೆ ಯಡಮಾಡಿಕೊಟ್ಟಿದೆ.

RELATED ARTICLES

Related Articles

TRENDING ARTICLES