Thursday, December 5, 2024

Bengaluru :10 ವರ್ಷದ ನಂತರ ಅತ್ಯಾಚಾರ ಪ್ರಕರಣಕ್ಕೆ ತೀರ್ಪು ನೀಡಿದ ನ್ಯಾಯಾಲಯ

ಬೆಂಗಳೂರು : ಬಾಯ್ ಫ್ರೆಂಡ್ ಕುತ್ತಿಗೆಗೆ ಚಾಕು ಇಟ್ಟು ಯುವತಿ ಮೇಲೆ ಅತ್ಯಾಚಾರ ಮಾಡಿದ್ದ ಪ್ರಕರಣದಲ್ಲಿ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು. 2014 ಏಪ್ರಿಲ್ 11 ರಂದು ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.

ಹತ್ತು ವರ್ಷಗಳ ಹಿಂದೆ ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತ ಕೃತ್ಯ ನಡೆದಿತ್ತು. ಪ್ರೇಮಿಗಳಿಬ್ಬರು MG ರಸ್ತೆಯಲ್ಲಿ ಡಿನ್ನರ್ ಮುಗಿಸಿ. ಮಧ್ಯರಾತ್ರಿ 12:30ರ ಸಮಯಲ್ಲಿ ಕಾರಿನಲ್ಲಿ ಕುಳಿತಿದ್ದರು. ಈ ಸಮಯದಲ್ಲಿ ಅಲ್ಲಿಗೆ ಬಂದ ನಾಲ್ವರು ಕಾಮುಕರು ಕಾರು ಹತ್ತಿ ದೌರ್ಜನ್ಯ ಎಸಗಿದ್ದರು.

ರಾತ್ರಿಯಿಡಿ ಸಂತ್ರಸ್ತೆಯಿದ್ದ ಕಾರಿನಲ್ಲೇ ಪುಲಕೇಶಿ ನಗರ ಸುತ್ತಾಡಿದ್ದ ಆರೋಪಿಗಳು. ಆ ಯುವತಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡಿದ್ದರು. ಶೇಕ್ ಹೈದರ್ ಎಂಬ ಆರೋಪಿಯ ಆಜ್ಞೆಯಂತೆ ಸಂತ್ರಸ್ತೆಯ ಸ್ನೇಹಿತನನ್ನು ಕಾರಿನಿಂದ ಇಳಿಸಿ ಆತನ ಕುತ್ತಿಗೆಗೆ ಚಾಕು ಇಡಿದು ಯುವತಿಗೆ ಬೆದರಿಸಿದ್ದರು. ನಾನು ಹೇಳಿದಂತೆ ಕೇಳದಿದ್ದರೆ ಯುವಕನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದರು.

ಅತ್ಯಾಚಾರ ಎಸಗಿ ಯುವಕನ ಬಳಿ 50 ಸಾವಿರಕ್ಕೆ ಡಿಮ್ಯಾಂಡ್ ಇಟ್ಟಿದ್ದ ಆರೋಪಿಗಳು, ಹಣ ನೀಡದಿದ್ದಕ್ಕೆ  ಹುಡುಗನ ಕೈಯಲ್ಲಿದ್ದ ವಾಚ್​ನ್ನು ಕಿತ್ತುಕೊಂಡು ಹೋಗಿದ್ದರು. ಈ ಘಟನೆ ಸಂಬಂಧ ಪುಲಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಮೊದಲಿಗೆ ಅಂದಿನ ಇನ್ಸ್ಪೆಕ್ಟರ್ ಸರಿಯಾದ ಮಾಡದಿದ್ದ ಹಿನ್ನಲೆ ಆತನನ್ನು ಸಸ್ಪೆಂಡ್​ ಮಾಡಿ ಆತನ ಜಾಗಕ್ಕೆ ಅಂದಿನ ಪುಲಕೇಶಿ ನಗರ ಉಪವಿಭಾಗ ಎಸಿಪಿ ನೂರುಲ್ಲ ಶರೀಫ್ ತನಿಖೆ ನಡೆಸಿದ್ದರು.

ತನಿಖೆ ಮುಗಿಸಿದ  ಐವರು ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದ ಪೋಲಿಸರು.ಕಾರಿನಲ್ಲಿ ಸಿಕ್ಕ ಆರೋಪಿಯ ತಲೆಕೂದಲು ಮತ್ತು ವೀರ್ಯದ ಕರುಹುಗಳನ್ನು ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿಸಿದ್ದರು.
ರಾಜಕೀಯ ಪ್ರಭಾವ ಹೊಂದಿದ್ದ ಆರೋಪಿಗಳಿಂದ ಪೋಲಿಸರ ಮೇಲೆ ಒತ್ತಡ ತರಲಾಗಿತ್ತು ಆದರೆ ಪೋಲಿಸರಿಗೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಸಫಲರಾಗಿದ್ದಾರೆ.

ಆರೋಪಿಗಳಗೆ ನೀಡಿರುವ ಶಿಕ್ಷೆಯ ಪ್ರಮಾಣ 

ಎ1 ಆರೋಪಿ ಶೇಕ್ ಹೈದರ್ ಗೆ 14 ವರ್ಷ ಕಠಿಣ ಶಿಕ್ಷೆ 31 ಸಾವಿರ ದಂಡ
ಎ2 ಸೈಯದ್ ಶಫಿಕ್ 10ವರ್ಷ ಸಜೆ 23 ಸಾವಿರ ದಂಡ
ಎ3 ಮೊಹಮ್ಮದ್ ಹಫೀಜ್ ಗೆ 3.500₹ ದಂಡ
ಎ4 ಶೋಯಬ್ ಗೆ 1 ವರ್ಷ ಸಜೆ ಹಾಗೂ 3.500₹ದಂಡ
ಎ5 ಮಹಮ್ಮದ್ ಇಸಾಕ್
6 ತಿಂಗಳ ಸಜೆ ಹಾಗೂ 3000 ದಂಡ
57ನೇ ಸಿಸಿಹೆಚ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES