ಮೈಸೂರು : ರಾಜ್ಯದಲ್ಲಿ ಕರಾವಳಿ ಕೊಲೆ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮರ್ಡರ್ ಆಗಿದೆ. 5 ಜನರ ತಂಡ ರೌಡಿಶೀಟರ್‌ನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡುವ ದೃಶ್ಯಗಳು ಮೈಸೂರಿಗರನ್ನು ಬೆಚ್ಚಿ ಬೀಳಿಸಿವೆ. ಒಂದು ನಿಮಿಷದಲ್ಲಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ ಆಗಂತುಕರು ಶವದ ಮುಂದೆ ಸಂಭ್ರಮಿಸಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ಕಾರ್ತಿಕ್(33) ಎಂದು ಗುರುತಿಸಲಾಗಿದೆ.
ಕಾರ್ತಿಕ್ ಮೈಸೂರು ತಾಲೂಕು ವರುಣ ಗ್ರಾಮದ ಸಮೀಪವಿದ್ದ ಹೋಟೆಲ್ನಲ್ಲಿ ಕಳೆದ 5 ದಿನಗಳಿಂದ ವಾಸವಾಗಿದ್ದ. ಆದರೆ ಕಳೆದ ರಾತ್ರಿ ಹೋಟೆಲ್ ಬಿಟ್ಟು ಹೊರಗೆ ಹೋಗಿದ್ದ ಕಾರ್ತಿಕ್, ಮಧ್ಯರಾತ್ರಿ 1:40ಕ್ಕೆ ಸರಿಯಾಗಿ ಹೋಟೆಲ್ಗೆ ಬಂದಿದ್ದಾನೆ. ಈ ವೇಳೆ ಕಾದು ಕುಳಿತಿದ್ದ ಕಿರಾತಕರು ಮಚ್ಚು, ಲಾಂಗುಗಳಿಂದ ಕೊಚ್ಚಿ ಕಾರ್ತಿಕ್ನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇದನ್ನೂ ಓದಿ :KPSC ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್..?; ಮತ್ತೊಂದು ಗಂಭೀರ ಆರೋಪ..!
ಘಟನೆ ಹಿನ್ನಲೆ..!
ಕೊಲೆಯಾದ ಕಾರ್ತಿಕ್ಗೆ ಈಗಿನ್ನೂ 33 ವರ್ಷ. ಮೈಸೂರಿನ ಕ್ಯಾತಾಮಾರನಹಳ್ಳಿ ನಿವಾಸಿಯಾದ ಈತ ಹಲವು ಕೇಸ್ಗಳಲ್ಲಿ ಭಾಗಿಯಾಗಿದ್ದ. ಈ ಕಾರಣಕ್ಕಾಗಿಯೇ ಅನೇಕ ಭಾರಿ ಜೈಲು ಸೇರಿ ಬೇಲ್ ಮೇಲೆ ಹೊರ ಬಂದಿದ್ದ. ಜೊತೆಗೆ ಈತನನ್ನು ಏರಿಯಾದಿಂದ ಗಡಿಪಾರು ಕೂಡ ಮಾಡಲಾಗಿತ್ತು. ಈತನ ಜೊತೆಗಿದ್ದ ಮೈಸೂರಿನ ಗಾಯತ್ರಿಪುರಂ ನಿವಾಸಿ ಪ್ರವೀಣ್ ಜೊತೆಗೆ ಒಂದೂವರೆ ವರ್ಷದ ಹಿಂದೆ ಹಣಕಾಸಿನ ವಿಚಾರ ಹಾಗೂ ಹುಡುಗಿ ವಿಚಾರದಲ್ಲಿ ಗಲಾಟೆ ನಡೆದಿತ್ತು.
ಅದಾದ ಬಳಿಕ ಮೈಸೂರಿನಲ್ಲಿದ್ದ ಈ ಪ್ರವೀಣ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದ. ಈಗ ನಾಲ್ಕು ದಿನಗಳಿಂದ ಕಾರ್ತಿಕ್ ರೂಮ್ನಲ್ಲಿ ಲವರ್ ಜೊತೆ ಒಬ್ಬನೇ ಇದ್ದಾನೆ ಅನ್ನೋ ವಿಚಾರವನ್ನ ಈ ಗ್ಯಾಂಗ್ ತಿಳಿದುಕೊಂಡಿತ್ತು. ತಡರಾತ್ರಿ ಫೋನ್ ಮಾಡಿ ಸಾರಿ ಕೇಳುವ ನೆಪದಲ್ಲಿ ಮೃತ ರೌಡಿಶೀಟರ್ ನನ್ನ 1 ಗಂಟೆ 40 ನಿಮಿಷದಲ್ಲಿ ಹೊರಗೆ ಕರೆಸಿದ್ರು ಹೊರಗೆ ಬಂದ ಬಳಿಕ ಒಂದು ಬೈಕ್ ಒಂದು ಕಾರ್ನಲ್ಲಿ ಬಂದು ಗ್ಯಾಂಗ್ ಏಕಾಏಕಿ ಲಾಂಗು, ಮಚ್ಚುಗಳಿಂದ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದಾರೆ. ಕೊಲೆ ಮಾಡಿರುವ ದೃಶ್ಯ ಹೋಟೆಲ್ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್: ಫಿಲ್ಮ ಛೇಂಬರ್ನಿಂದ ಅಧಿಕೃತ ಘೋಷಣೆ
ಇನ್ನು ಮಗನಿಗೆ ರಾತ್ರಿ 10.45ರಲ್ಲಿ ಫೋನ್ ಮಾಡಿ ಊಟ ಮಾಡಿಕೊಂಡು ಹೋಗಲು ಹೇಳಿದ್ದ ತಾಯಿ, ಚಪಾತಿ ಮಾಡಿ ಬಡಿಸಿದ್ದರು. ಕಾರ್ತಿಕ್ ರಾತ್ರಿ 11.30ಕ್ಕೆ ಬಂದು ಊಟ ಮಾಡಿಕೊಂಡು ಹೋದ. ನಂತರ ರಾತ್ರಿ 1.30ಕ್ಕೆ ಆತನ ಜೊತೆಗಿದ್ದ ಹುಡುಗಿಯಿಂದ ಪೋನ್ ಬಂದಿದ್ದು, ತಾಯಿ ತೆಗೆದಿರಲಿಲ್ಲ. ನಂತರ ಬೆಳಿಗ್ಗೆ ಆತನ ಸ್ನೇಹಿತರು ಮನೆ ಮುಂದೆ ಬಂದು ಕೂಗಾಡಿದಾಗ ವಿಷಯ ಗೊತ್ತಾಗಿದ್ದು, ಲಕ್ಷ್ಮಿ ಎಂಬುವಳ ಮೂಲಕ ಪ್ರವೀಣ್‌ನಿಂದ ಈ ಕೊಲೆ ಆಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾಳೆ.
ಘಟನೆ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೊಲೆ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ತಿಳಿದು ಬಂದಿದೆ.