Monday, May 19, 2025

ಹಸುವಿನ ಕೆಚ್ಚಲು ಕೂಯ್ದವರ, ಕೈ-ಕಾಲುಗಳನ್ನು ಕಟ್​ ಮಾಡುವ ಸಮಯ ಬರುತ್ತೆ : ಕೆ.ಎಸ್​ ಈಶ್ವರಪ್ಪ

ವಿಜಯಪುರ : ವಿಜಯಪುರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಹಿರಿಯ ಬಿಜೆಪಿ ಮುಖಂಡ ಕೆ.ಎಸ್​ ಈಶ್ವರಪ್ಪ ಸ್ವಪಕ್ಷದ ಪರಿಸ್ಥಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು. ಹಸುಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯಪುರ ನಗರದಲ್ಲಿ ಮಾತನಾಡಿದ ಈಶ್ವರಪ್ಪ ‘ ರಾಜ್ಯದಲ್ಲಿ ರಾಜಕಾರಣ ಗಬ್ಬೆದ್ದು ಹೋಗಿದೆ. ನಾನು‌ ರಾಜಕೀಯ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಕಾರ್ಯಕರ್ತರು ನಾಚಿಕೆ ಪಡುವ ಹಾಗೆ ಆಗಿದೆ.
ಅನೇಕ ಹಿರಿಯರು ಕಟ್ಟಿದ ಬಿಜೆಪಿ ಪಕ್ಷದ ಪರಿಸ್ಥಿತಿ ಹೇಳತೀರದಾಗಿದೆ. ಈಗ ಬಿಜೆಪಿ ಪಕ್ಷಕ್ಕೆ ಸಿದ್ದಾಂತವೇ ಇಲ್ಲದಂತಾಗಿದೆ. ಸಾಮೂಹಿಕ ನೇತೃತ್ವ ಪಕ್ಷದಲ್ಲಿ ಉಳಿದಿಲ್ಲ, ಒಂದು ಕುಟುಂಬದ ಕೈ ಯಲ್ಲಿ ಪಕ್ಷ ಸಿಕ್ಕಿದೆ.

ನಮ್ಮ‌ ಭಿಕ್ಷೆಯಲ್ಲಿ ಚುನಾವಣೆ ಗೆದ್ದಿದ್ದೀಯಾ ಎಂದು ಡಿ ಕೆ ಶಿವಕುಮಾರ್ ವಿಜಯೇಂದ್ರಗೆ ಹೇಳುತ್ತಾರೆ. ಕಾಂಗ್ರೆಸ್ ನಲ್ಲಿ ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿ ಅನ್ನುತ್ತಾರೆ, ಇನ್ನೊಂದೆಡೆ ಮತ್ತೊಂದು ಸಮಾಜದವರು ಸಭೆ ಮಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು ಅಂತಾರೆ. ಆದರೆ ಅವರ ಮಾತಿಗೆ ಎಲ್ಲೂ ಬೆಲೆ ಇಲ್ಲ.

ಇದನ್ನೂ ಓದಿ :ಮದುವೆ ಸಮಾರಂಭಕ್ಕೆ ಸಜ್ಜಾದ ರಾಷ್ಟ್ರಪತಿ ಭವನ: ಭದ್ರತಾ ಅಧಿಕಾರಿಗೆ ಖುಲಾಯಿಸಿದ ಅದೃಷ್ಟ

ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರು ಕುಂಭಮೇಳವನ್ನು ಟೀಕೆ ಮಾಡಿದರು. ಕುಂಬಮೇಳಕ್ಕೆ ಹೋಗಿ ಸ್ನಾನ‌ ಮಾಡಿದರೆ ಬಡವರ ಹೊಟ್ಟೆ ತುಂಬತ್ತಾ ಅನ್ನುತ್ತಾರೆ. ನಿಮ್ಮಂತವರಿಗೆ ಟೀಕೆ ಮಾಡಲು ನನ್ಮ ಮನಸ್ಸು ಬರುತ್ತಿಲ್ಲ. ಡಿ ಕೆ ಶಿವಕುಮಾರ್ ಕುಟುಂಬ ಸಮೇತವಾಗಿ ಹೋಗಿ ಬರುವದಾಗಿ ಹೇಳುತ್ತಾರೆ. ಯು‌ ಟಿ ಖಾದರ್ ಅವರು ಹೋಗಿ ಬಂದಿದ್ದಾರೆ. ಹಾಗಿದ್ದರೆ ಯು ಟಿ ಖಾದರ್ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ನಿಮ್ಮ ಪಕ್ಷದಿಂದ ಕಿತ್ತಾಕಿ.

ಹಸುಗಳ ಬಾಲ, ಕೆಚ್ಚಲು ಕಟ್ ಮಾಡುವವರಿಗೆ ಹಿಂದೂ‌ ಸಮಾಜ ಮುಂದಿನ‌ ದಿನದಲ್ಲಿ ಅಂತವರ ಕೈ ಕಾಲು ಕಟ್ ಮಾಡುವ ಸಮಯ ಬರತ್ತೆ. ಖರ್ಗೆ ಅವರು ಹಿಂದೂ‌ ಸಮಾಜದ ಬಗ್ಗೆ ಮಾತನಾಡುವದನ್ನು ಬಿಟ್ಟು ಬಾಯಿ ಮುಚ್ಚಿಕೊಂಡ ಇರಬೇಕು ಎಂದು ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES