ಹಾವೇರಿ : ಪ್ರೀತಿಸಿದ ಯುವತಿ ಪ್ರೀತಿಯನ್ನು ನಿರಾಕರಿಸಿದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು. ಯುವತಿ ಮುಂದೆಯೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ಮಾಹಿತಿ ದೊರೆತಿದೆ. 25 ವರ್ಷದ ಪ್ರವೀಣ್ ಬೆಟದೂರ ಎಂಬ ಪಾಗಲ್ ಪ್ರೇಮಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಹುಬ್ಬಳ್ಳಿ ತಾಲೂಕು ಬೆಳಗಲಿ ಗ್ರಾಮದ ನಿವಾಸಿ ಪ್ರವೀಣ್, ಧಾರವಾಡ ಜಿಲ್ಲೆ ಕುಂದಗೋಳ ತಾಲೂಕು, ಶೀರೂರು ಗ್ರಾಮದ ಬಸಮ್ಮ ಡಂಬಳ್ ಎಂಬಾಕೆಯ ಜೊತೆ ಕಳೆದ ಕೆಲ ವರ್ಷಗಳಿಂದ ಸ್ನೇಹ ಬೆಳೆಸಿದ್ದನು. ಬಸಮ್ಮ ವರೂರಿನಲ್ಲಿ ಬಿ.ಎಸ್ಸಿ ನರ್ಸಿಂಗ್ ಮಾಡುತ್ತಿದ್ದಳು.
ಆದರೆ ಕಳೆದ ಕೆಲ ದಿನಗಳ ಹಿಂದ ಪ್ರವೀಣ್ ಬಸಮ್ಮನ ಬಳಿ ತನ್ನ ಪ್ರೇಮವನ್ನು ನಿವೇಧಿಸಿಕೊಂಡಿದ್ದನು. ಆದರೆ ಬಸಮ್ಮ ಈತನ ನಿವೇದನೆಯನ್ನು ತಿರಸ್ಕರಿಸಿದ್ದಳು. ಆದರೆ ಇಂದು ಮಾತನಾಡುವ ನೆಪದಲ್ಲಿ ಬಸಮ್ಮನನ್ನು ತಡಸ ಬಳಿ ಕರೆದುಕೊಂಡು ಬಂದಿದ್ದ ಪ್ರವೀಣ್, ಮಾರ್ಗ ಮಧ್ಯೆ ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ಕೂಡ ತಂದಿದ್ದನು.
ಆದರೆ ಯುವತಿ ಮತ್ತೆ ಈತನ ನಿವೇದನೆಯಲ್ಲಿ ತಿರಸ್ಕರಿಸಿದ ಹಿನ್ನಲೆಯಲ್ಲಿ ಯುವತಿ ಎದುರೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ತಡಸದ ಗ್ರಾಮದ ತಾಯವ್ವನ ದೇವಸ್ಥಾನದ ಬಳಿ ನಡೆದ ಘಟನೆ ನಡೆದಿದ್ದು. ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್ ಬೆಟದೂರರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಶಿಗ್ಗಾವಿ ತಾಲೂಕು ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.