ಶ್ರೀನಗರ : ಏಷ್ಯಾದ ಮೊದಲ ಜಲ ಸಾರಿಗೆ ಸೇವೆ, “ಉಬರ್ ಶಿಕಾರಾ” ಈಗ ಜಮ್ಮು ಕಾಶ್ಮೀರದ ಸುಂದರ ದಾಲ್ ಸರೋವರದಲ್ಲಿ ಲಭ್ಯವಿದೆ. ಉಬರ್ ತನ್ನ ಅಪ್ಲಿಕೇಶನ್‌ನಲ್ಲಿ ಶಿಕಾರ ಬುಕಿಂಗ್‌ಗಳೊಂದಿಗೆ ಏಷ್ಯಾದ ಮೊದಲ ಜಲ ಸಾರಿಗೆ ಸೇವೆಯನ್ನು ಹೊರತಂದಿದೆ.
ದಾಲ್ ಸರೋವರಕ್ಕೆ ಭೇಟಿ ನೀಡುವ ಪ್ರವಾಸಿಗರು ಈಗ ಉಬರ್‌ನ ಮೊದಲ ಜಲ ಸಾರಿಗೆ ಸೇವೆ ‘ಉಬರ್ ಶಿಕಾರಾ’ವನ್ನು ಪ್ರಾರಂಭಿಸುವುದರೊಂದಿಗೆ ಪ್ರಯಾಣದ ಅನುಭವವನ್ನು ಆನಂದಿಸಬಹುದು. ‘ಸಂಪ್ರದಾಯದೊಂದಿಗೆ ತಂತ್ರಜ್ಞಾನವನ್ನು’ ಸಂಯೋಜಿಸುವ ಗುರಿ ಹೊಂದಿ ಈ ಹೊಸ ಯೋಜನೆ ಮಾಡಲಾಗಿದೆ.
ಇದು ಊಬರ್ ಆ್ಯಪ್ ಮೂಲಕ ಪ್ರಯಾಣಿಕರಿಗೆ ಶಿಕಾರಾ ರೈಡ್ ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ಬಳಕೆದಾರರ ಬೇಡಿಕೆಯ ಆಧಾರದ ಮೇಲೆ ದೋಣಿಗಳನ್ನು ವಿಸ್ತರಿಸುವ ಯೋಜನೆಗಳೊಂದಿಗೆ ಉಬರ್ ಏಳು ಸ್ಥಳೀಯ ಶಿಕಾರಾ ಮಾಲೀಕರೊಂದಿಗೆ ಪಾಲುದಾರಿಕೆ ಹೊಂದಿದೆ.