Friday, April 4, 2025

ರಾಜ್ಯದ ಜನ ವಿಜಯೇಂದ್ರರನ್ನು ಮರಿ ರಾಜಾಹುಲಿ ಎಂದು ಕರೆಯುತ್ತಾರೆ : ರೇಣುಕಾಚಾರ್ಯ

ದಾವಣಗೆರೆ : ಮಾಜಿ ಸಚಿವ ರೇಣುಕಾಚಾರ್ಯ ದಾವಣಗೆರೆಯಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದು. ಯತ್ನಾಳ್ ನೀಡಿದ​​ ಥರ್ಡ್​ ಕ್ಲಾಸ್​ ಎಂಬ ಹೇಳಿಕೆಗೆ ಟಾಂಗ್​​ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ರೇಣುಕಾಚಾರ್ಯ.  ಬಿ.ವೈ ವಿಜಯೇಂದ್ರ ಏಕೆ ಸಿಎಂ ಆಗಬಾರದು? ಎಂದು ಪ್ರಶ್ನಿಸಿದರು ಮತ್ತು ವಿಜಯೇಂದ್ರಗೆ  ರಾಜ್ಯದ ಜನರು ಮರಿ ರಾಜಾಹುಲಿ ಎಂದು ಪಟ್ಟಾ ಕಟ್ಟಿದ್ದಾರೆ.
ಯಡಿಯೂರಪ್ಪ ಸೈಕಲ್ ತುಳಿದು ಬೈಕ್ ಓಡಿಸಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸಿಎಂ ಆಗಬೇಕೆಂಬುದು ರಾಜ್ಯದ ಜನರು ಕನಸು ಕಂಡಿದ್ದಾರೆ. ಆದರೆ ಯತ್ನಾಳ್​ ಅಸೂಯೆಯಿಂದ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಪಿತೂರಿ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ರೇಣುಕಾಚಾರ್ಯ, ಯತ್ನಾಳ್​ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕು ಬಿಜೆಪಿ ವಿರುದ್ಧ ಅಲ್ಲಾ ಎಂದು ಯತ್ನಾಳ್​ರನ್ನು ತರಾಟೆಗೆ ತೆ್ಗೆದುಕೊಂಡರು.

ಯತ್ನಾಳ್​​ ಥರ್ಡ್​ ಕ್ಲಾಸ್​ ಹೇಳಿಕೆಗೆ ಟಾಂಗ್​​ ಕೊಟ್ಟ ರೇಣುಕಾಚಾರ್ಯ

ಯತ್ನಾಳ್​​ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, ಯತ್ನಾಳ್​ ನನ್ನನ್ನು ಥರ್ಡ್ ಕ್ಲಾಸ್ ರಾಜಕಾರಣಿ ಎಂದಿದ್ದಾರೆ, ಹಾಗಾದರೆ ಯತ್ನಾಳ್ 4th ಕ್ಲಾಸ್ ರಾಜಕಾರಣಿ, ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದೇವೆ ಎನ್ನುತ್ತಾರೆ ಒಂದು ವೇಳೆ ಇಂದು ವಾಜಪೇಯಿ ಅವರು ಬದುಕಿದ್ದರೆ ತುಂಬಾ ನೋವು ಮಾಡಿಕೊಳ್ಳುತ್ತಿದ್ದರು.ಶೀಘ್ರದಲ್ಲೆ ರಾಜ್ಯಧ್ಯಕ್ಷರು ಮಾಜಿ ಸಿಎಂಗಳ ನೇತೃತ್ವದಲ್ಲಿ 3 ತಂಡಗಳೊಂದಿಗೆ ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಸಭೆ ಮಾಡಿ ರಾಜ್ಯದ ಜನರ ಮುಂದೆ ಕಾಂಗ್ರೆಸ್ ಬಣ್ಣ ಬಯಲು ಮಾಡುತ್ತೇವೆ. ಪಡಿತರ ಚೀಟಿ ರದ್ದು, ವಕ್ಫ್ ಆಸ್ತಿ ಸೇರಿದಂತೆ ಕಾಂಗ್ರೆಸ್ ಮಾಡಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.

RELATED ARTICLES

Related Articles

TRENDING ARTICLES