Wednesday, January 22, 2025

ವಕ್ಫ್​​ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವಂತೆ ಕೋರಿ ಪ್ರಧಾನಿಗೆ ಪತ್ರ ಬರೆದ ಯತ್ನಾಳ್

ವಿಜಯಪುರ: ವಕ್ಫ್ ವಿವಾದ ವಿಚಾರ ದಿನದಿಂದ ದಿನಕ್ಕೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಇದಕ್ಕೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರಧಾನಿಗೆ ಪತ್ರ ಬರೆದಿದ್ದಾರೆ. ವಕ್ಫ್ ಬೋರ್ಡ್ ನಿಂದ ಜಮೀನು ಮಾಲೀಕರಿಗೆ, ರೈತರಿಗೆ ತೊಂದರೆಯಾಗುತ್ತಿದೆ, ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಕ್ಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ.

ವಕ್ಫ್ ವಿವಾದ ಎಂಬುವಂಥದ್ದು ವಿಜಯಪುರ ಜಿಲ್ಲೆಯಿಂದಲೇ ಆರಂಭಗೊಂಡಿದೆ. ಕಳೆದ ತಿಂಗಳು ಅಕ್ಟೋಬರ್ 7 ಹಾಗೂ 8 ರಂದು ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಕ್ಫ್ ಅದಾಲತ್ ನಡೆಸಿ, ವಕ್ಫ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ‌ ಸೂಚನೆ ನೀಡಿ 45 ದಿನಗಳಲ್ಲಿ ಪ್ಲ್ಯಾಗಿಂಗ್ ಮಾಡುವಂತೆ ಸೂಚಿಸಿದ್ದರು. ಇದರನ್ವಯ ಅಧಿಕಾರಿಗಳು ರೈತರಿಗೆ ನೋಟಿಸ್ ನೀಡಿದ ಬೆನ್ನಲ್ಲೆ ವಕ್ಫ್ ವಿವಾದ ಹೊತ್ತುಕೊಂಡಿತ್ತು. ಇದರ ಬೆನ್ನಲ್ಲೇ ರೈತರು ಧರಣಿ ಸತ್ಯಾಗ್ರಹ ಆರಂಭಿಸಿದ ಬೆನ್ನಲ್ಲೇ ರೈತರಿಗೆ ನೀಡಿದ ನೋಟಿಸ್ ಸರ್ಕಾರ ವಾಪಸ್ ಪಡೆಯಿತು ಜೊತೆಗೆ ಕೆಲ ರೈತರ ಆರ್ ಟಿ ಸಿ‌ಯಲ್ಲಿ ವಕ್ಫ್ ಎಂದು‌ಸೇರ್ಪಡೆ ಮಾಡಿದ್ದನ್ನು ತಗೆದ ಪ್ರಯುಕ್ತ ರೈತರು ಹೋರಾಟ ಕೈ ಬಿಟ್ಟರು. ಈ ವಿಚಾರವಾಗಿ ಈಗ ಶಾಸಕ ಯತ್ನಾಳ ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಗುಮ್ಮಟನಗರಿ ವಿಜಯಪುರದಲ್ಲಿ ಆರಂಭವಾದ ವಕ್ಪ್ ಆಸ್ತಿ ವಿವಾದ ಇದೀಗ ಪ್ರಧಾನ ಮಂತ್ರಿ ಕಚೇರಿ ತಲುಪಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನ ಮಂತ್ರಿ ಮೋದಿ ಅವರಿಗೆ ಪತ್ರ ಬರೆದು ವಕ್ಪ್ ಆಸ್ತಿಯನ್ನ ರಾಷ್ಟ್ರಕರಣ ಮಾಡುವಂತೆ ಆಗ್ರಹಿಸಿದ್ದಾರೆ. ದೇಶದಲ್ಲಿ ಇನ್ನೊಂದು ಪಾಕಿಸ್ತಾನ ಆಗಬಾರದು ಅಂದ್ರೆ ವಕ್ಪ್ ರಾಷ್ಟ್ರೀಕರಣವಾಗಬೇಕು ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ರೈತರು, ಮಠಗಳ ಆಸ್ತಿಗಳಿಗೆ ವಕ್ಪ್ ಕರಾಳ ಶಾಸನವಾಗಿದೆ. ನೆಹರು ಮಾಡಿದ ಪಾಪದ ಕೆಲಸ ಈ ವಕ್ಪ್ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದು ವಕ್ಪ್ ಆಸ್ತಿ ರದ್ದು ಮಾಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಸದ್ಯ ವಕ್ಪ್ ವಿಚಾರ ಜಿಲ್ಲೆಯಲ್ಲಿ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆ. ನವೆಂಬರ್ 4 ರಿಂದ ಮತ್ತೆ ಹೋರಾಟ ಶುರುವಾಗುವ ಸಾಧ್ಯತೆ ಇದೆ. ವಕ್ಪ್ ವಿಚಾರ ರೈತರು ಹಾಗೂ ಸರ್ಕಾರದ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವೇ ಬೆನ್ನಲ್ಲೆ‌ ರಾಜಕೀಯ ನಾಯಕರ ಪರಸ್ಪರ ಆರೋಪಕ್ಕೆ ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ…

 

RELATED ARTICLES

Related Articles

TRENDING ARTICLES